ಸಹೋದರ ಸಹೋದರಿಯರ ನಡುವಿನ ಸಂಬಂಧವು ತುಂಬಾ ಪವಿತ್ರವಾದದ್ದು ಎಂದು ಭಾವಿಸಲಾಗುತ್ತದೆ. ಆದರೆ ಇಲ್ಲೊಂದು ಕಡೆಯಲ್ಲಿ ರಕ್ತ ಸಂಬಂಧಕ್ಕೆ ಬೆಲೆ ನೀಡದೇ ಅಣ್ಣನೊಂದಿಗೆ ತಂಗಿಯನ್ನೇ ಮದುವೆ ಮಾಡುವ ವಿಚಿತ್ರವಾದ ಸಂಪ್ರದಾಯವಿದೆ.
ಭಾರತದ ಈ ಬುಡಕಟ್ಟು ಜನಾಂಗದಲ್ಲಿ ಸಹೋದರಿಯನ್ನೇ ಮದುವೆ ಆಗುವ ವಿಚಿತ್ರ ಸಂಪ್ರದಾಯವಿದೆ.ಈ ಬುಡಕಟ್ಟಿನಲ್ಲಿ ಒಡಹುಟ್ಟಿದವರು ವಯಸ್ಸಿಗೆ ಬಂದ ನಂತರದಲ್ಲಿ ಗಂಡ ಹೆಂಡತಿಯಾಗುತ್ತಾರೆ.
ಛತ್ತೀಸ್‌ಗಢದಲ್ಲಿ ಬಾಸ್ಟರ್ ಪ್ರಾಂತ್ಯದಲ್ಲಿ ಧುರ್ವಾ ಎಂಬ ಬುಡಕಟ್ಟು ಜನಾಂಗದವರು ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರು ತಮ್ಮದೇ ಅದ ಆಚಾರ ವಿಚಾರ, ವಿಚಿತ್ರ ಪದ್ಧತಿಯಿಂದಲೇ ಗಮನ ಸೆಳೆದಿದ್ದಾರೆ. ಈ ಬುಡಕಟ್ಟು ಜನಾಂಗದಲ್ಲಿ ಹೆತ್ತವರೇ ತಮ್ಮ ಇಬ್ಬರು ಮಕ್ಕಳಾದ ಅಣ್ಣ ತಂಗಿಯರಿಗೆ ಮದುವೆ ಮಾಡುತ್ತಾರೆ.
ಮಗಳನ್ನು ಮಗನಿಗೆ ಮದುವೆ ಮಾಡುವ ಪದ್ಧತಿ ಈ ಗ್ರಾಮದಲ್ಲಿ ಹಲವು ವರ್ಷಗಳಿಂದಲೇ ನಡೆಯುತ್ತಿದೆ. ಇದಕ್ಕೆ ಕಾರಣ ಈ ಧುರ್ವಾ ಬುಡಕಟ್ಟು ಜನರು ರಕ್ತ ಸಂಬಂಧಗಳ ಬಗ್ಗೆ ನಂಬಿಕೆಯನ್ನು ಇಟ್ಟಿಲ್ಲ. ಇದೇ ಕಾರಣದಿಂದಾಗಿ ಈ ಬುಡಕಟ್ಟಿನ ಜನರು ಮಗಳನ್ನೇ ಮಗನಿಗೆ ಧಾರೆಯೆರೆದು ಕೊಡುತ್ತಾರೆ.
ಮಕ್ಕಳು ಈ ಮದುವೆಯನ್ನು ನಿರಾಕರಿಸಿದರೆ ಅವರಿಗೆ ಭಾರಿ ದಂಡವನ್ನು ವಿಧಿಸಲಾಗುತ್ತದೆಯಂತೆ. ಈ ಬುಡಕಟ್ಟು ತಮ್ಮ ತಮ್ಮ ಮಕ್ಕಳಿಗೆ ಮದುವೆ ಮಾಡಿಸಿಕೊಂಡು ಮನೆಯಲ್ಲಿ ಇರಿಸಿಕೊಳ್ಳುತ್ತಾರೆ. ಧುರ್ವಾ ಬುಡಕಟ್ಟಿನಲ್ಲಿ ಕಡಿಮೆ ಜನಸಂಖ್ಯೆಯ ಕಡಿಮೆಯಿರುವುದೇ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುವುದು ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q