ಮದ್ಯವ್ಯಸನಿಯಾಗಿದ್ದ ಯುವಕನೊಬ್ಬ ಹೆತ್ತತಾಯಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ದಾಂಡೇಲಿಯಲ್ಲಿ ನಡೆದಿದೆ.ಆರೋಪಿಯನ್ನು ರೋಕಿ ಜಾನ್ ಪುಡ್ತೋಳ(24) ಎಂದು ಗುರುತಿಸಲಾಗಿದೆ.
ಈತ ತನ್ನ ತಾಯಿ ಜತೆ ದಾಂಡೇಲಿ ಪಟ್ಟಣದ ಅರಣ್ಯ ಇಲಾಖೆ ಡಿಪೋ ಆವರಣದಲ್ಲಿ ವಾಸವಾಗಿದ್ದ.
ಎಂದಿನಂತೆ ಶನಿವಾರ ರಾತ್ರಿಯೂ ಮದ್ಯ ಸೇವಿಸಿ ಮನೆಗೆ ಬಂದಿದ್ದ ಮಗ ನಿದ್ದೆ ಮಾಡುತಿದ್ದ ತಾಯಿಯನ್ನು ಎಬ್ಬಿಸಿ ಏನೋ ಮಾತಾಡಬೇಕು ಎಂದು ಸೋಫಾ ಬಳಿ ಕರೆದು ಅತ್ಯಾಚಾರವೆಸಗಿದ್ದಾನೆ.
ಈ ಘಟನೆಯಿಂದ ಕಂಗಾಲಗಿದ್ದ ತಾಯಿಯು ಮಗನಿಂದ ತಪ್ಪಿಸಿಕೊಂಡು ತನ್ನ ಕೋಣೆ ಸೇರಿಕೊಂಡಿದ್ದರು.ಮರುದಿನ ಬೆಳಗ್ಗೆ 6ರ ಸುಮಾರಿಗೆ ಆರೋಪಿ ‘ತಾನು ಎಲ್ಲಿಯೋ ಹೋಗಬೇಕು’ ಎಂದು ತಾಯಿಯನ್ನು ಕರೆದು ಪುನಃ ಅತ್ಯಾಚಾರವೆಸಗಿದ್ದಾನೆ. ಮಾತ್ರವಲ್ಲದೆ ಬೆದರಿಕೆಯನ್ನು ಹಾಕಿದ್ದಾನೆ.ಎಂದು ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy