ಕೊಪ್ಪಳ: ಯಾವುದೇ ಕಾರಣಕ್ಕೆ ಹಿಜಾಬ್ ಹಾಕಿಕೊಂಡು ಶಾಲೆಗೆ ಬರುವಂತಿಲ್ಲ, ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಈ ಸಂಬಂಧ ಮಾತನಾಡಿದ ಅವರು, ನ್ಯಾಯಾಲಯದ ಆದೇಶ ಪಾಲನೆ ಮಾಡದವರಿಗೆ ಶಾಲೆಗೆ ಪ್ರವೇಶವಿಲ್ಲ. ಹಠ ಮಾಡಲು ಅವರಿಗೆ ಹೇಗೆ ಹಕ್ಕಿದೆಯೋ ಹಾಗೆಯೇ ಒಳಗೆ ಬಿಡದೇ ಇರಲು ಕಾನೂನೂ ಸಹ ಇದೆ ಎಂದು ಹೇಳಿದ್ದಾರೆ.
ಒಂದಷ್ಟು ಜನರು ಈ ರೀತಿ ಮತ್ತೆ ಪ್ರಚಾರಕ್ಕೆ ತಂದು ದೇಶದ ಅಶಾಂತಿ ಹಾಳುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಪ್ರಯತ್ನ ಇದರಲ್ಲೂ ನಡೆದಿದೆ ಎಂದು ಆರೋಪಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


