nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಿಎಂಟಿಸಿ ಬಸ್‌ ಗಳ ಮೇಲೆ ಗುಟ್ಕಾ ಜಾಹೀರಾತು: ಕೇಂದ್ರ ಗುಟ್ಕಾ ನಿಷೇಧ ಮಾಡಲಿ: ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

    January 29, 2026

    ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ: ಪೋಷಕರಿಂದ ಬೃಹತ್ ಪ್ರತಿಭಟನಾ ಸಮಾವೇಶ

    January 29, 2026

    ಗುಬ್ಬಿ:  ಜನವರಿ 30ರಂದು ತ್ಯಾಗಟೂರು ಗ್ರಾಮದ ಸರ್ಕಾರಿ ಶಾಲೆ ಶತಮಾನೋತ್ಸವ

    January 29, 2026
    Facebook Twitter Instagram
    ಟ್ರೆಂಡಿಂಗ್
    • ಬಿಎಂಟಿಸಿ ಬಸ್‌ ಗಳ ಮೇಲೆ ಗುಟ್ಕಾ ಜಾಹೀರಾತು: ಕೇಂದ್ರ ಗುಟ್ಕಾ ನಿಷೇಧ ಮಾಡಲಿ: ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?
    • ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ: ಪೋಷಕರಿಂದ ಬೃಹತ್ ಪ್ರತಿಭಟನಾ ಸಮಾವೇಶ
    • ಗುಬ್ಬಿ:  ಜನವರಿ 30ರಂದು ತ್ಯಾಗಟೂರು ಗ್ರಾಮದ ಸರ್ಕಾರಿ ಶಾಲೆ ಶತಮಾನೋತ್ಸವ
    • ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ತಪ್ಪಲಿದೆ ಅನಾಹುತ: ಪಿಎಸ್‌ ಐ ತೀರ್ಥೇಶ್
    • ರೈತ ಸಂಘ, ಹಸಿರು ಸೇನೆ ತಾಲೂಕು ಅಧ್ಯಕ್ಷರಾಗಿ ಕಣಕೂರ್ ಚಂದ್ರಶೇಖರ್ ಆಯ್ಕೆ
    • ಆಂಬುಲೆನ್ಸ್ ಬಾಗಿಲು ಜಾಮ್; ಆಸ್ಪತ್ರೆಯ ಬಾಗಿಲುವರೆಗೆ ತಲುಪಿದರೂ, ರೋಗಿ ಸಾವು
    • ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್; ಲೋಕಾಯುಕ್ತ ನೀಡಿದ್ದ ‘ಬಿ–ರಿಪೋರ್ಟ್’ ಅಂಗೀಕರಿಸಿದ ಕೋರ್ಟ್
    • ಪುಸ್ತಕಗಳು ಬದುಕಿನ ಶೈಲಿಯಾಗಬೇಕು: ಪ್ರಾಂಶುಪಾಲ ರಮಾನಂದ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ಚಾಲನೆ:  ಇಲ್ಲಿದೆ ಸಂಪೂರ್ಣ ವರದಿ
    ರಾಜ್ಯ ಸುದ್ದಿ September 21, 2024

    ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ಚಾಲನೆ:  ಇಲ್ಲಿದೆ ಸಂಪೂರ್ಣ ವರದಿ

    By adminSeptember 21, 2024No Comments2 Mins Read
    tumakuru

    ತುಮಕೂರು: ನಗರದಲ್ಲಿ ನಡೆಯುತ್ತಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವವನ್ನು ಕೇಂದ್ರ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಇಂದು ಉದ್ಘಾಟಿಸಿದರು.

    ನಗರದ ಟೌನ್ ಹಾಲ್ ವೃತ್ತದಲ್ಲಿ ಆರಂಭವಾದ ಅಂತಹ ಮಹೋತ್ಸವವನ್ನು ಸಚಿವ ವಿ.ಸೋಮಣ್ಣ ಡಮರುಗ ಬಾರಿಸುವ ಮೂಲಕ ಉದ್ಘಾಟಿಸಿದರು.


    Provided by
    Provided by

    ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗಿದ್ದು  ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಪ್ರತಿಷ್ಟಾಪಿಸಲ್ಪಟ್ಟಿರುವ ಗಣಪತಿಯಾಗಿದೆ.

    ತುಮಕೂರಿನ ಬಿಜಿಎಸ್ ವೃತ್ತದ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಟಾಪನೆ ಮಾಡಿರುವ ಹಿಂದೂ ಮಹಾಗಣಪತಿಯಾಗಿದೆ. ಬಾಂಬೆ ಡೋಲ್, ಡಿಜೆ ಸೇರಿದಂತೆ ವಿವಿಧ ಕಲಾತಂಡಗಳಿಂದ ಮೆರವಣಿಗೆಗೆ ಮೆರಗು ನೀಡಿವೆ.

    ಮೆರವಣಿಗೆಯಲ್ಲಿ ಶ್ರೀರಾಮ, ಆಂಜನೇಯ, ಭಾರತ ಮಾತೆ, ನಂದಿ ಸೇರಿದಂತೆ ಹಲವು ಕಟೌಟ್ ಗಳನ್ನು ಹಾಕಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.

    ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ರಾತ್ರಿ ‌10 ಗಂಟೆವರೆಗೂ ನಡೆಯಲಿರುವ ಮೆರವಣಿಗೆಯುದ್ಧಕ್ಕೂ ತುಮಕೂರು ಎಸ್.ಪಿ.ಅಶೋಕ್ ವೆಂಕಟ್ ನೇತೃತ್ವದಲ್ಲಿ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ.

    ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಕಟ್ಟೆಚ್ಚರ ವಹಿಸಿದ್ದು ಸಾವಿರಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

    ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು:  

    ದರ್ಗಾ ಎದುರಿನಿಂದ ಸಾಗುತ್ತಿದ್ದ ಗಣೇಶ ಮೆರವಣಿಗೆ ವೇಳೆ ಗಣೇಶನಿಗೆ ಹಾರ ಹಾಕಿ, ವಿಶೇಷ ಪೂಜೆಯನ್ನು ಮುಸ್ಲಿಂ ಬಾಂಧವರು ಸಲ್ಲಿಸಿದರು. ನಗರದ ಜೋಡಿ ಮಜಾರ್ ಎದುರು ಘಟನೆ ಹಜರತ್ ಹುಸೇನ್ ಭಾಷಾ ಖಾದ್ರಿ ದರ್ಗಾ ಎದುರು ವಿಶೇಷ ಪೂಜೆ ಮಾಡಲಾಯಿತು.

    ತುಮಕೂರು ವಿವಿ ವಿದ್ಯಾರ್ಥಿಗಳಿಗೆ ನಿರ್ಬಂಧ:

    ಇಂದು ತುಮಕೂರು ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಆಯೋಜಿಸಲಾಗಿದೆ.  ಈ ಕಾರ್ಯಕ್ರಮದಲ್ಲಿ ಕೋಮು ಪ್ರಚೋದನೆಯಿಂದ ಗಲಾಟೆ ನಡೆಯುವ ಸಾಧ್ಯತೆಯಿದೆ.  ಹೀಗಾಗಿ  ಶಾಲಾ ಕಾಲೇಜಿನ ಮಕ್ಕಳು ಯಾರ ಒತ್ತಡಕ್ಕೆ ಒಳಗಾಗಿ ಮೆರಣಿಗೆಯಲ್ಲಿ ಪಾಲ್ಗೊಳ್ಳುವಂತಿಲ್ಲ.‌  ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವಿವಿಯ ಎಚ್ ಒಡಿಗಳಿಗೆ ಆದೇಶ ಮಾಡಲಾಗಿದೆ.

    ಮುನ್ನೆಚ್ಚರಿಕೆ ಕ್ರಮವಾಗಿ ಆದೇಶ ಹೊರಡಿಸಿದ ತುಮಕೂರು ವಿವಿ ಕುಲಸಚಿವರು.‌ ತುಮಕೂರು ವಿವಿಗೆ ಪತ್ರ ಬರೆದಿರುವ ಪೊಲೀಸರು.ತುಮಕೂರು ನಗರ ಠಾಣೆ ಪೊಲೀಸರಿಂದ ಕುಲ ಸಚಿವರಿಗೆ ಪತ್ರ ಬರೆಯಲಾಗಿದೆ.

    ಇಂದು ನಡೆಯುವ ಗಣೇಶೋತ್ಸವ ಮೆರವಣಿಗೆಯಲ್ಲಿ ಗಲಾಟೆ ನಡೆಯುವ  ಮಾಹಿತಿಯಿದೆ. ಕೋಮು ಪ್ರಚೋದನಕಾರಿ ಘಟನೆಗಳು ನಡೆಯುವ ಸಂಭವಿದೆ.  ಮೆರವಣಿಗೆಯಲ್ಲಿ ನಾಗರೀಕರು ಶಾಲಾ ಕಾಲೇಜು ಮಕ್ಕಳು ಭಾಗವಹಿಸುವ ಸಾಧ್ಯತೆಯಿದೆ. ಕೋಮು ಭಾವನೆ ಕೆರಳಿಸುವ ಕಿಡಿಗೇಡಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಶಾಲಾ ಕಾಲೇಜು ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಮೆರವಣಿಗೆಗೆ ಕರೆತರುವ ಸಾಧ್ಯತೆಯಿದೆ. ಇದಕ್ಕೆ ಆಸ್ಪದ ಕೊಡದಂತೆ ಎಚ್ಚರಿಕೆವಹಿಸುವಂತೆ ವಿವಿ ಕುಲಸಚಿವರಿಗೆ ಪತ್ರ ಬರೆಯಲಾಗಿದೆ .  ಪೊಲೀಸರ ಪತ್ರದ ಆಧಾರದ ಮೇಲೆ ಕುಲಸಚಿವರು ಆದೇಶ ಹೊರಡಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಬಿಎಂಟಿಸಿ ಬಸ್‌ ಗಳ ಮೇಲೆ ಗುಟ್ಕಾ ಜಾಹೀರಾತು: ಕೇಂದ್ರ ಗುಟ್ಕಾ ನಿಷೇಧ ಮಾಡಲಿ: ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

    January 29, 2026

    ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್; ಲೋಕಾಯುಕ್ತ ನೀಡಿದ್ದ ‘ಬಿ–ರಿಪೋರ್ಟ್’ ಅಂಗೀಕರಿಸಿದ ಕೋರ್ಟ್

    January 28, 2026

    ಮೃತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿ ನೌಕರಿ: ನೇಮಕಾತಿ ಆದೇಶ ಪತ್ರ ಹಸ್ತಾಂತರಿಸಿದ ಸಿಎಂ ಸಿದ್ದರಾಮಯ್ಯ

    January 28, 2026

    Comments are closed.

    Our Picks

    ಆಂಬುಲೆನ್ಸ್ ಬಾಗಿಲು ಜಾಮ್; ಆಸ್ಪತ್ರೆಯ ಬಾಗಿಲುವರೆಗೆ ತಲುಪಿದರೂ, ರೋಗಿ ಸಾವು

    January 28, 2026

    ಬಾರಾಮತಿಯಲ್ಲಿ ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ದುರ್ಮರಣ

    January 28, 2026

    77ನೇ ಗಣರಾಜ್ಯೋತ್ಸವ ಸಂಭ್ರಮ: ಗಮನಸೆಳೆದ ಭಾರತದ ಸೇನಾ ಶಕ್ತಿ ಮತ್ತು ಸಾಂಸ್ಕೃತಿಕ ವೈಭವ

    January 26, 2026

    ಆರ್ಡರ್ ಮಾಡಿದ್ದು ಕಸ್ಟಮರ್.. ಆದ್ರೆ ಹೊಟ್ಟೆ ತುಂಬಿದ್ದು ಡೆಲಿವರಿ ಬಾಯ್ ಗೆ! ರಾತ್ರಿ 2:30ಕ್ಕೆ ನಡೆದ ‘ಬಿರಿಯಾನಿ’ ಪುರಾಣ

    January 17, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬಿಎಂಟಿಸಿ ಬಸ್‌ ಗಳ ಮೇಲೆ ಗುಟ್ಕಾ ಜಾಹೀರಾತು: ಕೇಂದ್ರ ಗುಟ್ಕಾ ನಿಷೇಧ ಮಾಡಲಿ: ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

    January 29, 2026

    ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳ ಮೇಲೆ ಗುಟ್ಕಾ ಮತ್ತು ಪಾನ್ ಮಸಾಲಾ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವುದಕ್ಕೆ ಸಾರ್ವಜನಿಕರಿಂದ…

    ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ: ಪೋಷಕರಿಂದ ಬೃಹತ್ ಪ್ರತಿಭಟನಾ ಸಮಾವೇಶ

    January 29, 2026

    ಗುಬ್ಬಿ:  ಜನವರಿ 30ರಂದು ತ್ಯಾಗಟೂರು ಗ್ರಾಮದ ಸರ್ಕಾರಿ ಶಾಲೆ ಶತಮಾನೋತ್ಸವ

    January 29, 2026

    ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ತಪ್ಪಲಿದೆ ಅನಾಹುತ: ಪಿಎಸ್‌ ಐ ತೀರ್ಥೇಶ್

    January 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.