ಹಿಂದೂಗಳು ಮುಸ್ಲಿಮರಂತೆ ಸಣ್ಣ ವಯಸ್ಸಿನಲ್ಲೇ ಮದುವೆಯಾಗಬೇಕು. ಆಗ ಹಿಂದೂಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.
ಮುಸ್ಲಿಂ ಪುರುಷರು 20ರಿಂದ 22 ವರ್ಷಕ್ಕೆ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು 18ಕ್ಕೆ ಮದುವೆಯಾಗುತ್ತಾರೆ. ಆದರೆ ಹಿಂದೂಗಳು ಮದುವೆಗೆ ಮೊದಲು ಒಬ್ಬರು, ಎರಡು ಅಥವಾ ಮೂರು ಅಕ್ರಮ ಪತ್ನಿಯರನ್ನು ಇಟ್ಟುಕೊಳ್ಳುತ್ತಾರೆ. ಮಕ್ಕಳಿಗೆ ಜನ್ಮ ನೀಡುವುದಿಲ್ಲ. ಆ ಮಹಿಳೆಯರೊಂದಿಗೆ ಎಂಜಾಯ್ ಮಾಡಿ ಆಮೇಲೆ ಬೇರೆ ಮದುವೆಯಾಗುತ್ತಾರೆ. ಇದರಿಂದ ಅವರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ ಎನ್ನುವ ಮೂಲಕ ಎಐಯುಡಿಎಫ್ ಮುಖ್ಯಸ್ಥ ವಿವಾದ ಸೃಷ್ಟಿಸಿದ್ದಾರೆ.
ಹಿಂದೂಗಳು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಭಾರತ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಹೇಳಿಕೆಗಳ ಬಗ್ಗೆ ಮಾತನಾಡಿದ ಎಐಯುಡಿಎಫ್ ಮುಖ್ಯಸ್ಥ ಅಜ್ಮಲ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 40 ವರ್ಷದ ನಂತರ ಹಿಂದೂಗಳು ಪೋಷಕರ ಒತ್ತಡಕ್ಕೆ ಮದುವೆಯಾಗುತ್ತಾರೆ. ಅವರು ಮಕ್ಕಳನ್ನು ಪಡೆಯುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಹೇಗೆ ನಿರೀಕ್ಷಿಸಬಹುದು? ಇದೇ ಕಾರಣದಿಂದ ಹಿಂದೂಗಳಲ್ಲಿ ಮಕ್ಕಳನ್ನು ಹೆರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಲವ್ ಜಿಹಾದ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನೀವು ಬೇಕಿದ್ರೆ ನಾಲ್ಕೈದು ಲವ್ ಜಿಹಾದ್ ನಡೆಸಿ, ಮುಸ್ಲಿಂ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಿ, ನಾವು ಸ್ವಾಗತ ಮಾಡುತ್ತೇವೆಯೇ ಹೊರತು ಜಗಳವಾಡುವುದಿಲ್ಲ. ಹಾಗೆ ಮಾಡಿದ್ರೆ ನಿಮ್ಮಲ್ಲೂ ಎಷ್ಟು ಶಕ್ತಿಯಿದೆ ಎಂದು ನೋಡಬಹುದು ಎಂದು ಲೇವಡಿ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy