ಸರಗೂರು: ತಾಲೂಕಿನ ಬಿ.ಮಟಕರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಹಿರೇಹಳ್ಳಿ ದೇವದಾಸ್ ಅವರು ಅವಿರೋಧವಾಗಿ ಆಯ್ಕೆಯಾದರು.
ಗುರುವಾರ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ದೇವದಾಸ್ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಹಿರೇಹಳ್ಳಿ ದೇವದಾಸ್ ಅವರು, ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಉಷಾ ಘೋಷಿಸಿದರು.
ಪಿಡಿಒ ಭಾಗ್ಯಮ್ಮ, ಸಹಕರಿಸಿದರು. ಪಂಚಾಯಿತಿ ಆವರಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಮಧಾರಿಗೌಡದ ಸಮುದಾಯದ ಮುಖಂಡರು ಸಿಹಿ ಹಂಚಿ ಹಾಗೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಉಪಾಧ್ಯಕ್ಷೆ ಗೌರಿಬಾಯಿ, ಸದಸ್ಯರಾದ ಅಜಿತ್‌ಕುಮಾರ್, ಎಂ.ನಾಗೇಂದ್ರ, ಕುರ್ಣೇಗಾಲ ಬೆಟ್ಟಸ್ವಾಮಿ, ಬೊಮ್ಮ, ವೀಣಾಕುಮಾರ್, ಎಚ್.ಕೃಷ್ಣ, ನಾಗೇಶ್, ನಾಗರತ್ನ, ರೂಪಾಬಾಯಿ, ರಾಣಿಬಾಯಿ, ಸುನೀತಾಬಾಯಿ, ಮೀನಾ ಕುಮಾರಿ, ಚಿನ್ನಮ್ಮ ಮಾದಪ್ಪ, ವಿನೋದ್, ನಾಗಯ್ಯ, ರತ್ನಮ್ಮ, ಎನ್.ಆರ್.ಅಶ್ವಿನಿ, ಸುಮತಿ, ಬಿಲ್ ಕಲೆಕ್ಟರ್ ಮಹೇಶ್, ಸರಸ್ವತಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ದೇವದಾಸ್ ಅವರು, ಪಂಚಾಯಿತಿಯು ಕಾಡಂಚಿನ ಗ್ರಾಮಗಳನ್ನು ಹೊಂದಿಕೊಂಡಿದ್ದು, ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇದಕ್ಕೆ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಸಂಭ್ರಮಾಚರಣೆ: ಅಧ್ಯಕ್ಷರಾಗಿ ದೇವದಾಸ್ ಅವರು ಅವಿರೋಧವಾಗಿ ಆಯ್ಕೆಯಾದ ಕೂಡಲೇ ಕಚೇರಿ ಆವರಣದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಸಮಾಜದ ಮುಖಂಡರು ಸಿಹಿ ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಪಿ ರವಿ, ದಾಸಪ್ಪ, ನಾಗೇಂದ್ರ ಎಚ್ ಪಿ, ರವಿ ಸಿ, ವೈಕುಂಠಯ್ಯ, ವಿಜೇಂದ್ರ, ನಂದಕುಮಾರ್, ಆಭಿಕುಮಾರ್, ಚಿನ್ನಯ್ಯ, ಶ್ರೀನಿವಾಸ ಎಚ್ ವಿ, ಮಲ್ಲೇಶ ನಾಯಕ, ನಾಗರಾಜನಾಯಕ, ರಾಜನಾಯಕ, ಮಂಜು, ಮಲ್ಲರಾಜು, ಹರೀಶ್, ಮಹೇಶ್, ಪ್ರಕಾಶ್, ರತ್ನಯ್ಯ, ನಾಗರಾಜು,ಅಜೀತ್ ಕುಮಾರ್ ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC