ಮೊನ್ನೆಯಷ್ಟೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿನ ಸಂತೇಪೇಟೆಯಲ್ಲಿರುವ ವಿನಾಯಕ ರೋಟರಿ ಆಯಿಲ್ ಮಿಲ್ ಮೂವತ್ತು ನಲವತ್ತು ವರ್ಷಗಳಿಂದ ನಡೆಸುತ್ತಿದ್ದರೂ, ಯಾವುದೇ ಪರವಾನಿಗೆ ಪಡೆಯದೇ ನಡೆಸಲಾಗುತ್ತಿದ್ದ ಬಗ್ಗೆ ನಮ್ಮ ತುಮಕೂರು ಮಾಧ್ಯಮದಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಹಿರಿಯೂರಿನ ವಾರ್ಡ್ ನಂ.18 ರಲ್ಲಿ ಮತ್ತೊಂದು ಇಂತಹದ್ದೇ ಆಯಿಲ್ ಮಿಲ್ ಪತ್ತೆಯಾಗಿದೆ.
ಆಯಿಲ್ ಮಿಲ್ ಗಳು ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಸಬೇಕಾಗಿದೆ. ಆದರೆ ಇಲ್ಲಿನ ಆಯಿಲ್ ಮಾಲೀಕರು ತಮ್ಮ ಲಾಭದಾಯಕ್ಕೋಸ್ಕರ ನಗರದ ಮಧ್ಯದಲ್ಲೇ ಆಯಿಲ್ ಮಿಲ್ ನಡೆಸುತ್ತಿದ್ದರೂ ಸಂಬಂಧ ಪಟ್ಟ ನಗರಸಭೆ ಆಡಳಿತ ಮಂಡಳಿಯ ಅಧಿಕಾರಿಗಳು , ತಾಲ್ಲೂಕು ಆಡಳಿತ, ಕಾರ್ಮಿಕ ಇಲಾಖೆ, ವಾಯು ಮಾಲಿನ್ಯ ಇಲಾಖೆ, ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮೌನವಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.
ನಗರ ಪ್ರದೇಶದಲ್ಲೇ ನ್ಯೂ ಕರ್ನಾಟಕ ಆಯಿಲ್ ಮಿಲ್ ನಡೆಸಲಾಗುತ್ತಿದೆ. ಇದರಿಂದಾಗಿ ಏನಾದರೂ ಅನಾಹುತ ನಡೆದರೆ ಯಾರು ಜವಾಬ್ದಾರಿ ಎಂದು ಕೇಳುವಂತಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕಿದೆ.
ಆಯಿಲ್ ಮಿಲ್ ಗಳು ಇಂಡಸ್ಟ್ರಿಯಲ್ ಏರಿಯಾದಲ್ಲೆ ನಡೆಸಬೇಕು ಎನ್ನುವ ಸರ್ಕಾರದ ಆದೇಶವಿದ್ದರೂ, ನಗರ ಪ್ರದೇಶದಲ್ಲೇ ನಡೆಸಲಾಗುತ್ತಿದೆ. ಯಾವುದೇ ಪರವಾನಿಗೆ ಪಡೆಯದೆಯೇ ಆಯಿಲ್ ಮಿಲ್ ನಡೆಸಿದರೂ ಯಾರೂ ಹೇಳುವವರು ಕೇಳುವವರಿಲ್ಲ ಎನ್ನುವಂತಹ ಸ್ಥಿತಿ ಇಲ್ಲಿದೆ. ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ, ಅಧಿಕಾರಿಗಳು ಕೂಡ ಕೈ ಜೋಡಿಸಿದ್ದಾರೆಯೇ ಎನ್ನುವ ಅನುಮಾನಗಳಿಗೆ ಕಾರಣವಾಗಿದೆ.
ವರದಿ: ಮುರುಳಿಧರನ್ ಆರ್, ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


