ಹಿರಿಯೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಬೆಳಗಿನಿಂದಲೇ ಮುಸ್ಲಿಂ ಬಾಂಧವರು ಮತ್ತು ಮಕ್ಕಳು ವಿಶೇಷ ಪೋಷಾಕು ಧರಿಸಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಬಿಲಾಲ್ ಮಸೀದಿ, ಜಾಮೀಯ ಮಸೀದಿಗಳು ಸೇರಿದಂತೆ ಹಿರಿಯೂರು ನಗರದ ಸುತ್ತಮುತ್ತಲಿನ ಎಲ್ಲಾ ಮಸೀದಿಗಳಲ್ಲಿ ಸಹ ಮುಸ್ಲಿಂ ಭಾಂಧವರು ಪ್ರಾರ್ಥನೆ ಮುಗಿಸಿ ಅಲ್ಲಾನ ನಾಮಗಳನ್ನು ಪಟಿಸುತ್ತಾ ಹಿರಿಯೂರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ನಂತರ ಹಿರಿಯೂರು ನಗರದ ಸಾವಿರಾರು ಮುಸ್ಲಿಂ ಬಾಂಧವರು ಮತ್ತು ಮಕ್ಕಳು ಸಹ ಹಿರಿಯೂರು ತಾಲ್ಲೂಕಿನ ತಾಲ್ಲೂಕು ಕಛೇರಿಯ ಹಿಂಭಾಗದ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಅನಂತರ ಜಾಮೀಯ ಮಸೀದಿಯ ಗುರುಗಳಾದ ಮುಸೇಬ್ ಉಲ್ಲಾ ಮೌಲಾನ , ಹಾಗೂ ಸಿಗ ಉಲ್ಲಾ ಮೌಲಾನ ಅವರು ಬಕ್ರೀದ್ ಹಬ್ಬದ ಮಹತ್ವ ಮತ್ತು ಮುಸ್ಲಿಂ ಬಾಂಧವರ ಕಾರ್ಯ ವೈಖರಿಯ ಬಗ್ಗೆ ಸುದೀರ್ಘವಾಗಿ ತಿಳಿಸಿದರು.
ಹಿರಿಯೂರು ನಗರದ ಜಾಮಿಯಾ ಮಸೀದಿಯ ಅಧ್ಯಕ್ಷರಾದ ನವಾಬ್ ಸಾಬ್ ಅವರು ಮಾತನಾಡಿ, ಕೊಡಗಿನಲ್ಲಿ ನವಾಬ್ ಸಾಬ್ ಅವರು ಮಾತ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಆಡಂಬರವಿಲ್ಲದೆ ಸರಳವಾಗಿ ಆಚರಿಸುತ್ತಿದ್ದೇವೆ. ತಾಲ್ಲೂಕಿನಲ್ಲಿ ಹಿಂದಿನಿಂದಲೂ ಮುಸ್ಲಿಂಮರು ಮತ್ತು ಹಿಂದುಗಳು ಶಾಂತಿ ಮತ್ತು ಸೌಹಾರ್ದತೆಗಾಗಿ ಇಂದು ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು.
ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮ ಸೇರಿದಂತೆ ದೇಶದ ಎಲ್ಲಾ ಸಮಾಜದವರಿಗೆ ಶಾಂತಿ, ಸಹೋದರತೆ ಉಂಟು ಮಾಡಲಿ ಎಂದು ಅಲ್ಲಾನಲ್ಲಿ ಬೇಡಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆ ನಿರ್ಮಿತ ಕೇಂದ್ರದ ಮೂಡಲಗಿರಿಯಪ್ಪ, ಜಗದೀಶ್, ಜಬಿ ಉಲ್ಲಾ ,ಶಕೀಲ್ ನವಾಜ್, ದಾದ ತುಲ್ಲಾ, ಅಬ್ದುಲ್ ಅಜೀಜ್ ,ಸೂರ್ಯೋದಯದ ಸ್ಟುಡಿಯೋ ಮಾಲಿಕರಾದ ಅಬ್ದುಲ್ ಅಜೀಜ್ , ಅಬ್ದುಲ್ ಕರೀಂ , ಸೇರಿದಂತೆ ಇನ್ನು ಮುಂತಾದ ಮುಖಂಡರುಗಳು ಬಕ್ರೀದ್ ಹಬ್ಬಕ್ಕೆ ಶುಭಕೋರಿದರು.
ವರದಿ: ಮುರುಳಿಧರನ್ ಆರ್ ಚಿತ್ರದುರ್ಗ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


