ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರದ ಮಧ್ಯಭಾಗದಲ್ಲಿರುವ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ದೇವಸ್ಥಾನ ಹಾಗೂ ಮಸ್ಕಲ್ ನ ಶ್ರೀ ಚಿಕ್ಕ ಮೈಲಾರಲಿಂಗೇಶ್ವರ ದೇವಸ್ಥಾನದ ಬಾಗಿಲು ಮುರಿದು ದೇವಸ್ಥಾನದಲ್ಲಿದ್ದ ಬೆಳ್ಳಿ ಆಭರಣಗಳು ಹಾಗೂ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ಕಳ್ಳತನ ಮಾಡಿದ ಆರೋಪಿಗಳು ಕೊನೆಗೂ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಚಿತ್ರದುರ್ಗ ಪೋಲೀಸ್ ಅಧೀಕ್ಷಕರಾದ ಪರಶುರಾಮ್ ಹಾಗೂ ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಎಚ್.ಕೆ.ಕುಮಾರಸ್ವಾಮಿ ರವರ ಮಾರ್ಗದರ್ಶನದಲ್ಲಿ ಹಿರಿಯೂರು ಉಪವಿಭಾಗ ಪೋಲೀಸ್ ಉಪಅಧೀಕ್ಷಕರಾದ ಸೈಯದ್ ರೋಷನ್ ಜಮೀರ್ ರವರ ಉಸ್ತುವಾರಿಯಲ್ಲಿ,
ನಗರ ಪೋಲೀಸ್ ನಿರೀಕ್ಷಕರಾದ ವಿ.ಎಸ್.ಶಿವಕುಮಾರ್, ಐಮಂಗಲ ವೃತ್ತ ನಿರೀಕ್ಷಕರಾದ ಕೆ.ಆರ್.ರಾಘವೇಂದ್ರ, ಹೊಸದುರ್ಗ ಠಾಣೆಯ ಪೋಲೀಸ್ ನಿರೀಕ್ಷಕರಾದ ಎಂ.ಡಿ.ಫೈಜುಲ್ಲಾ ನೇತೃತ್ವದಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ.ಅನುಸೂಯ ಸೇರಿದಂತೆ ವಿವಿಧ ಪೋಲೀಸ್ ಇಲಾಖೆಯ ಸಿಬ್ಬಂದಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶ ಮೂಲದ ರಮೇಶ್ ತಂದೆ ರಾಮು, ಗುರುಪ್ರಸಾದ್ ತಂದೆ ನಾಗರಾಜಪ್ಪ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಶ್ರೀ ತೇರುಮಲ್ಲೇಶ್ವರ ದೇವಸ್ಥಾನದಿಂದ ಆರೋಪಿಗಳು ಕಳವು ಮಾಡಿದ್ದ 3 ಕೆ.ಜಿ ಪ್ರಭಾವಳಿ, 500 ಗ್ರಾಂ ಮುಖವಾಡ, 500 ಗ್ರಾಂ ಬೆಳ್ಳಿ ನಾಗಾಭರಣ, ಒಟ್ಟು 4 ಕೆ.ಜಿ. ಬೆಳ್ಳಿ ಮತ್ತು ಮಸ್ಕಲ್ ಶ್ರೀ ಚಿಕ್ಕಮೈಲಾರಲಿಂಗೇಶ್ವರ ದೇವಸ್ಥಾನದ 500 ಗ್ರಾಂ ಬೆಳ್ಳಿ ನಾಗಾಭರಣ, 500 ಗ್ರಾಂ ಬೆಳ್ಳಿ ಕಿರೀಟ, ಒಟ್ಟು 1 ಕೆ.ಜಿ. ಬೆಳ್ಳಿ ಆಭರಣಗಳು, ಸೇರಿದಂತೆ 3 ಮೋಟಾರು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅತಿಶ್ರೀಘ್ರದಲ್ಲೇ ಶ್ರೀ ತೇರುಮಲ್ಲೇಶ್ವರ ದೇವಸ್ಥಾನದ ಬೆಳ್ಳಿ- ಆಭರಣಗಳು ಹಾಗೂ ಹುಂಡಿ ಒಡೆದು ಹಣವನ್ನು ದೋಚಲಾಗಿದ್ದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಿರಿಯೂರು ಡಿವೈಎಸ್ಪಿ ಸೈಯದ್ ರೋಷನ್ ಜಮೀರ್, ಪೋಲೀಸ್ ವೃತ್ತನಿರೀಕ್ಷರುಗಳಾದ ಕೆ.ಆರ್.ರಾಘವೇಂದ್ರ, ವಿ.ಎಸ್.ಶಿವಕುಮಾರ್, ಹೊಸದುರ್ಗ ಠಾಣೆಯ ವೃತ್ತನಿರೀಕ್ಷಕರಾದ ಎಂ.ಡಿ.ಫೈಜುಲ್ಲಾ ಹಾಗು ಅಪರಾಧ ವಿಭಾಗದ ಪಿ.ಎಸ್.ಐ. ಶ್ರೀಮತಿ ಅನುಸೂಯ ಸೇರಿದಂತೆ ಸಿಬ್ಬಂದಿಯನ್ನು ಚಿತ್ರದುರ್ಗ ಪೊಲೀಸ್ ಅಧೀಕ್ಷಕರಾದ ಪರಶುರಾಮ್ ರವರು ಅಭಿನಂದಿಸಿದ್ದಾರೆ.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


