ಸರಗೂರು: 2025– 26 ನೇ ಸಾಲಿನ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಲಯನ್ಸ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅತಿ ಹೆಚ್ಚು ಬಹುಮಾನಗಳನ್ನು ಪಡೆದುಕೊಂಡಿದ್ದೇವೆ ಎಂದು ಬುಧವಾರ ಶಾಲೆಯ ಮುಖ್ಯ ಶಿಕ್ಷಕ ಬಿ.ಡಿ.ದಾಸಚಾರಿ ತಿಳಿಸಿದರು.
ಅಥ್ಲೆಟಿಕ್ಸ್ ವಿಭಾಗದಲ್ಲಿ ಬಾಲಕರ 100 ಮೀಟರ್ ಓಟ ಪ್ರಥಮ, 200 ಮೀಟರ್ ಓಟ ತೃತೀಯ, 800 ಮೀಟರ್ ಓಟ ತೃತೀಯ, 3000 ಮೀಟರ್ ಓಟ ತೃತೀಯ, 4*10 ರಿಲೇ ಪ್ರಥಮ, 4*400 ಮೀಟರ್ ರಿಲೇ ದ್ವಿತೀಯ, ಜಾವೆಲಿನ್ ತೃತೀಯ, ಎತ್ತರ ಜಿಗಿತ ಪ್ರಥಮ, ಉದ್ದ ಜಗಿತ ಪ್ರಥಮ, ಬಾಲಕಿಯರ ವಿಭಾಗದಲ್ಲಿ 4* 400 ಮೀಟರ್ ರಿಲೇ ದ್ವಿತೀಯ, ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ತೃತೀಯ, ಗುಂಡು ಎಸೆತ ಪ್ರಥಮ, ಜಾವೆಲಿನ್ ಪ್ರಥಮ, ತಟ್ಟೆ ಎಸೆತ ತೃತೀಯ, ಗುಂಪು ಆಟಗಳಲ್ಲಿ ಹುಡುಗರ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಹುಡುಗಿಯರ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಬಾಲಕಿಯರ ಕಬಡ್ಡಿ ಪ್ರಥಮ, ಬಾಲಕಿಯರ ತ್ರೋಬಾಲ್ ದ್ವಿತೀಯ, ಬಾಲಕಿಯರ ವಾಲಿಬಾಲ್ ದ್ವಿತೀಯ ಹಾಗೂ ಪತಸಂಚಲನದಲ್ಲಿ ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ. ಶರತ್ ಎಂಬ ವಿದ್ಯಾರ್ಥಿ ಶಾಲೆಯ ಚಾಂಪಿಯನ್ ಆಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ.
ವಿಜೇತರಾದ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯು ಅಭಿನಂದಿಸಿದೆ. ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಐ.ಎಸ್.ವಿಜಯ್ ಕುಮಾರ್ ರವರನ್ನು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದಿಸಿದ್ದಾರೆ. ಇದೇ ಸಂದರ್ಭದಲ್ಲಿ ಲೈನ್ಸ್ ಅಕಾಡೆಮಿ ಶಾಲೆಯ ಪ್ರಾಂಶುಪಾಲ ಬಿ.ಡಿ.ದಾಸಾಚಾರಿ, ಮುಖ್ಯ ಶಿಕ್ಷಕಿ ಪದ್ಮಶ್ರೀ ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


