ಹಾಸನ: ಹೊಳೆನರಸೀಪುರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಕೋಟೆಯಲ್ಲಿ ಲಯನ್ಸ್ ಕ್ಲಬ್ ಹೊಳೆನರಸೀಪುರ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಹೆಣ್ಣೂರು ಮುಖ್ಯ ರಸ್ತೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಮುಖ್ಯ ಶಿಕ್ಷಕರಾದ ದವಲತ್ ರಾವ್ ಇವರ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಬುದ್ಧಿ ಮಾಂದ್ಯ, ಸೀಳು ತುಟಿ, ಪಾರ್ಶ್ವವಾಯು, ಧ್ವನಿ ತೊಂದರೆ, ಕಿವಿ ಸೋರುವಿಕೆ, ಕಲಿಕಾ ತೊಂದರೆ, ವಾಕ್, ಶ್ರವಣ, ದೋಷವುಳ್ಳ ಇಂತಹ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷೆ ಹರಿನಾಕ್ಷಿ ಬಿ.ಎಲ್., ಕಾರ್ಯದರ್ಶಿ ಲೀನಾಕ್ ಲಿದ್, ಮಹಮದ್ ಖಾಲಿದ್, ವಲಯ ಅಧ್ಯಕ್ಷರು ಮತ್ತು ಸದಸ್ಯರು ತಾಲ್ಲೂಕು ಅಂಗವಿಕಲ ಇಲಾಖೆಯವರಾದ ಕೆ.ಬಿ.ಹರೀಶ್, ಬಿ.ಆರ್.ಸಿ.ಕೇಂದ್ರದಿಂದ ವಿಶ್ವನಾಥ್, ಎಚ್.ಓಂಗಿರಪ್ಪ, ಪ್ರಶಾಂತ್, ಜ್ಯೋತಿಲಕ್ಷ್ಮೀ ಶಾಲೆಯ ಶಿಕ್ಷಕರು. ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಮಂಜು, ಶ್ರವಣೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


