ಚಿತ್ರದುರ್ಗ: ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ನೊಂದು ಗೃಹ ರಕ್ಷಕ ದಳದ ಸಿಬ್ಬಂದಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜೆ.ಬಿ.ಹಳ್ಳಿಯಲ್ಲಿ ನಡೆದಿದೆ.
ತಿರುಮಲ ರಾಂಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ತಿರುಮಲ (31) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.
ತಿರುಮಲ ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದು, ವಯಸ್ಸಾಗ್ತಿದೆ ಮದುವೆ ಮಾಡಿಕೊಳ್ಳಬೇಕು ಎನ್ನುವ ಚಿಂತೆಗೆ ಬಿದ್ದಿದ್ದರು ಎನ್ನಲಾಗಿದೆ.
ಅಲ್ಲದೇ ಇತ್ತೀಚಿಗೆ ಮೂರು ಕಡೆ ಹೆಣ್ಣು ನೋಡಲು ತೆರಳಿದ್ದು, ಹೆಣ್ಣಿನ ಕಡೆಯವರಿಂದ ತಿರಸ್ಕಾರಗೊಂಡ ಪರಿಣಾಮ ಮನಸ್ಸಿಗೆ ಹೆಚ್ಚು ಘಾಸಿಯಾಗಿತ್ತು ಎನ್ನಲಾಗಿದೆ.
ಮದುವೆ ಬಗ್ಗೆಯೇ ತೀವ್ರ ಯೋಚಿಸುತ್ತಿದ್ದ ತಿರುಮಲ ಮನನೊಂದು, ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಮೃತನ ತಂದೆ ಸೋಮರೆಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC