ಪಾವಗಡ: ದಶಕಗಳ ಹೋರಾಟಕ್ಕೆ ಜಯ ಸಿಕ್ಕ ಹಿನ್ನೆಲೆಯಲ್ಲಿ ಹೋರಾಟದಲ್ಲಿ ಉಪವಾಸ ಸತ್ಯಾಗ್ರಹ ಅಹರ್ನಿಶಿ ಧರಣಿ ಪಾದಯಾತ್ರೆ ಸೇರಿದಂತೆ ನಿತ್ಯ ನಿರಂತರವಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿ ಹೋರಾಟ ಪೂರೈಕೆ ಮಾಡಿದ್ದರ ಹಿನ್ನೆಲೆ, ಇಂದು ಪಾವಗಡ ತಾಲ್ಲೂಕಿಗೆ ತುಂಗಭದ್ರಾ ಹಿನ್ನೀರು ಪೈಪ್ ಲೈನ್ ಮೂಲಕ ಪಾವಗಡ ತಾಲ್ಲೂಕಿಗೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ಹೋರಾಟಗಾರರನ್ನು ಸ್ಮರಣೆ ಮಾಡಿಕೊಳ್ಳುವಂತ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಹೋರಾಟಗಾರರಿಗೆ ಸನ್ಮಾನ ಮತ್ತು ಕೃತಜ್ಞತಾ ಪೂರ್ವಕವಾಗಿ ಅಭಿನಂದನ ಕಾರ್ಯಕ್ರಮವನ್ನು ನೆರವೇರಿಸಲು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಶಿವಪ್ರಸಾದ್ ತಿಳಿಸಿದರು.
ಪಾವಗಡದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಹತ್ತಾರು ದಶಕಗಳ ಹೋರಾಟದ ಫಲವಾಗಿ ಇಂದು ತುಂಗಭದ್ರಾ ಹಿನ್ನೀರು ಪೈಪ್ ಲೈನ್ ಮೂಲಕ ಪಾವಗಡ ತಾಲ್ಲೂಕಿಗೆ ಕುಡಿಯುವ ನೀರು ಹರಿಯುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಇದು ತಾಲೂಕಿನ ನಾಗರಿಕರ ಹೆಮ್ಮೆಯ ವಿಷಯವೂ ಕೂಡ ಆಗಿದೆ. ಅದರಿಂದ ಎಲ್ಲಾ ಹೋರಾಟಗಾರರನ್ನು ಸ್ಮರಣೆ ಮಾಡಿಕೊಳ್ಳುವಂತಹ ಕೆಲಸವನ್ನು ಸಮಿತಿ ಮಾಡಲಿದೆ ಎಂದರು.
ಈ ಹೋರಾಟದಲ್ಲಿ ಪಕ್ಷಾತೀತವಾಗಿ ಜಾತ್ಯತೀತವಾಗಿ ತಾಲೂಕಿನ ಹಿತಬಯಸಿ ಭಾಗಿಯಾಗಿರುವ 1000 ಕ್ಕೂ ಹೆಚ್ಚು ಹೋರಾಟಗಾರರನ್ನು ಗುರುತಿಸಲಾಗಿದೆ ಎಂದರು.
ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಎತ್ತಿನಹೊಳೆ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಮುಂದಿನ ಹೋರಾಟಗಳ ರೂಪುರೇಷೆಗಳ ಯೋಜನೆ ತಯಾರಿಸುವ ಕಾರ್ಯವನ್ನು ಕೂಡ ಮಾಡುತ್ತೇವೆ ಎಂದು ಶಿವಪ್ರಸಾದ್ ತಿಳಿಸಿದರು. ಸನ್ಮಾನ ಕಾರ್ಯಕ್ರಮಕ್ಕೆ ತನು ಮನ ಧನದೊಂದಿಗೆ ಸಹಕಾರ ನೀಡುವುದಾಗಿ ಸ್ವಯಂ ಪ್ರೇರಿತರಾಗಿ ತಾಲೂಕಿನ ಅನೇಕರು ಮುಂದೆ ಬರುತ್ತಿದ್ದಾರೆ ಎಂದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಮುಖಂಡ ಗೌಡೇಟಿ ಪ್ರಭಾಕರ್ ಅವರು, 25,000. ರೂಪಾಯಿಗಳ ದೇಣಿಗೆ ನೀಡುವ ಮುಖೇನ ಕಾರ್ಯಕ್ರಮ ಚನ್ನಾಗಿ ಆಗಲು ಸಹಕಾರ ನೀಡುವುದಾಗಿ ಹೇಳಿದರು. ಹೋರಾಟಗಾರರನ್ನು ಸ್ಮರಣೆ ಮಾಡಿಕೊಳ್ಳುವ ಮುಖೇನ ಮುಂದಿನ ಪೀಳಿಗೆಗೆ ಇದರ ಆಳ ಅಗಲ ಮತ್ತು ನೀರನ್ನು ತರಲು ಹೋರಟಗಾರರು ಪಟ್ಟ ಪರಿಶ್ರಮಗಳೇನು ಎನ್ನುವುದನ್ನು ತಾಲೂಕಿನ ಯುವ ಜನತೆಗೆ ತಿಳಿಸುವಂತಹದಾಗಬೇಕು ಎಂದು ಅವರು ಸಲಹೆ ನೀಡಿದರು.
ತಾಲೂಕಿನ ಎಲ್ಲರು ಇದರಲ್ಲಿ ಭಾಗಿಯಾಗುವುದರ ಮುಖೇನ ಎಲ್ಲ ಹೋರಾಟಗಾರರನ್ನು ಸ್ಮರಣೆ ಮಾಡಿಕೊಳ್ಳುವಂತ ಕೆಲಸ ಆಗಬೇಕು ಎಂದರು.
ನೀರಾವರಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್ ಮಾತನಾಡಿ, ಇದು ಅವಿಸ್ಮರಣೀಯ ಕಾರ್ಯಕ್ರಮವಾಗಬೇಕು ಮತ್ತು ಇದು ಆತ್ಮಾಭಿಮಾನದ ಕಾರ್ಯ ಎಂದು ಹೇಳಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ, ರೈತ ಸಂಘಟನೆಗಳಿಂದ ಬಂದಂತ ಎಲ್ಲ ಹೋರಾಟಗಾರರನ್ನು ಕರೆ ತರುವಂತ ಕೆಲಸವನ್ನ ನಾನು ಮಾಡುತ್ತೇನೆ ಇದು ಯಶಸ್ವಿಯಾಗಬೇಕೆಂದು ಅವರು ಕೂಡ ಹೇಳಿದರು.
ಖಜಾಂಚಿ ಪುರುಷೋತ್ತಮ್ ರೆಡ್ಡಿ ಅವರು ಮಾತನಾಡಿ, ಎಲ್ಲರಿಗೂ ನೆನಪಿನ ಕಾಣಿಕೆ ನೀಡುವ ಮೂಖೇನ ಅರ್ಥಪೂರ್ಣವಾಗಿ ಸನ್ಮಾನ ಮಾಡುವಂತಹದಾಗಬೇಕು ಎಂದರು.
ಹೋರಾಟಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರನ್ನೂ ಸ್ಮರಣೆ ಮಾಡಿಕೊಳ್ಳುವಂತದಾಗಬೇಕು ಎಂದು ಮೈಲಾರರೆಡ್ಡಿ ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ನ ಮಹಿಳಾ ಮುಖಂಡರಾಗಿರುವಂತ ಸಾಯಿಸುಮನ ಅವರು ಎಲ್ಲ ಹೋರಾಟಗಾರರಿಗೆ ನೆನಪಿನ ಕಾಣಿಕೆ ನೀಡುವುದಾಗಿ ಹೇಳಿದರು. ಸಭೆಯಲ್ಲಿ ಕೊತ್ತೂರು ಪ್ರಭಾಕರ್ ಪಳವಳ್ಳಿ ನರಸಿಂಹರೆಡ್ಡಿ, ಶಿವಕುಮಾರ್ ಸಾಖೇಲ್ ಶೇಖರ್ ಬಾಬು, ಮಾನಂ ಶಶಿಕಿರಣ್, ಕಡಪಲಕೆರೆ. DSS ಹನುಮಂತರಾಯ, ಚಂದ್ರನಾಯಕ್, ಬ್ಯಾಡನೂರು ಶಿವು, ಬಾಲಮ್ಮನಹಳ್ಳಿ ಸೂರಿ, ತಿಪ್ಪೇಸ್ವಾಮಿ, ನಾಗರಾಜ್, ದೇವಲಕೆರೆ ಲೋಕೇಶ್, ಶ್ರೀರಾಮಸೇನೆ, ಕನ್ನಡ ಪರ ಸಂಘಟನೆಗಳು ಭಜರಂಗದಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4