ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ನಗರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರನೌಕರರ ಸಂಘ, ಹಿರಿಯೂರು ಸಮಿತಿ ಹಾಗೂ ಕರ್ನಾಟಕ ರಾಜ್ಯ ಹೊರಗುತ್ತಿಗೆ ನೌಕರರ ಸಂಘ ಹಿರಿಯೂರು ಶಾಖೆಯ ನೇತೃತ್ವದಲ್ಲಿ ಜುಲೈ 1 ಶುಕ್ರವಾರದಿಂದ ರಾಜ್ಯಾದ್ಯಂತ ನಗರ ನೈರ್ಮಲ್ಯ, ಸ್ವಚ್ಛತೆ ಸ್ಥಗಿತಗೊಳಿಸಿ, ಹಮ್ಮಿಕೊಳ್ಳಲಾಗಿದ್ದ ಅನಿರ್ಧಿಷ್ಟಾವಧಿ ಮೂರನೇ ದಿನಕ್ಕೆ ಕಾಲಿಟ್ಟಿಟ್ಟಿದ್ದು, ಹೊರಗುತ್ತಿಗೆದಾರರಾದ ಪೌರಕಾರ್ಮಿಕರು, ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್ ಗಳು, ವಾಟರ್ ಮ್ಯಾನ್ ಗಳು ಇಂದೂ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರಸಭೆ ಕಾರ್ಯಾಲಯದ ಮಾಜಿ ಉಪಾಧ್ಯಾಕ್ಷರಾಗಿದ್ದ ಜ್ಯೋತಿಲಕ್ಷ್ಮಿ ಗೋಪಿಯಾದವ್, ನಾನು ನಗರಸಭೆಯ ಮಾಜಿ ಉಪಾಧ್ಯಕ್ಷೆಯಾಗಿ ಕೆಲಸ ಮಾಡಿದ್ದು, ಈಗಲೂ ಸಹ ಕಾರ್ಮಿಕ ವಿಭಾಗದಲ್ಲಿ ಕಾರ್ಯಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಗುತ್ತಿಗೆ ಕಾರ್ಮಿಕರು ಜೀವನ ನಡೆಸುವುದು ತುಂಬಾ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಗುತ್ತಿಗೆ ಆಧಾರದ ನೌಕರರನ್ನು ಖಾಯಂಗೊಳಿಸಿದರೆ, ಅವರ ಕುಟುಂಬ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದರು.
ಸರ್ಕಾರ ಇಂದು ಪೌರಕಾರ್ಮಿಕರಿಗೆ ಸಂಕಷ್ಟ ಬತ್ಯೆ 2,000 ಘೋಷಿಸಿದೆ. ಈ ಸಂದರ್ಭದಲ್ಲಿ ಸರ್ಕಾರ ಐಪಿಡಿ ಸಾಲಪ್ಪ ವರದಿ ಚಂದ್ರಶೇಖರ ಸಮಿತಿ ವರದಿ ಹಾಗೂ ರಾಷ್ಟ್ರೀಯ ಕಾನೂನು ಶಾಲೆಯ ವರದಿಗಳಿಗೆ ಸರ್ಕಾರ ಸೂಚಿಸಿದೆ. ಪೌರಕಾರ್ಮಿಕ ಮಹಿಳೆಯರಿಗೆ ಸರ್ಕಾರ ಸರ್ಕಾರಿ ಮಹಿಳಾ ನೌಕರರಿಗೆ ನೀಡುವ ಹೆರಿಗೆ ಭತ್ಯೆ, ಗೃಹ ಮುಂತಾದ ಸೌಲತ್ತುಗಳನ್ನು ಸರ್ಕಾರ ಘೋಷಿಸಿರುವುದು ಸ್ವಾಗತ. ಹಾಗೆಯೇ ಸರ್ಕಾರ ಈ ಕೂಡಲೇ ಗುತ್ತಿಗೆ ನೌಕರರದಾರರನ್ನು ಖಾಯಂ ನೌಕರರನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರವು 7ನೇ ಆಯೋಗ ಇಂತಹದ್ದೊಂದು ಸಲಹೆ ನೀಡಿದರೂ ಬಹುತೇಕ ಗುತ್ತಿಗೆದಾರರು ರಾಜಕಾರಣಿಗಳು, ಬೆಂಬಲಿಗರು ಆಗಿರುವುದರಿಂದ ಗುತ್ತಿಗೆ ಕಾರ್ಮಿಕರಿಗೆ ಐದಾರು ಸಾವಿರ ರೂ.ಗಳಷ್ಟು ಕಡಿಮೆ ವೇತನ ನೀಡುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸೂರ್ಯೋದಯ ಸ್ಟುಡಿಯೋ ಛಾಯಾಗ್ರಹಕರಾದ ಅಬ್ದುಲ್ ಅಜೀಜ್ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಪೌರ ಕಾರ್ಮಿಕರ ಸೇವೆಯು ಬಹಳಷ್ಟು ಮುಖ್ಯವಾಗಿದೆ. ಕೋವಿಡ್ 19. ಸಂದರ್ಭದಲ್ಲಿ ಯಾರೊಬ್ಬರೂ ಸಹ ತಮ್ಮ ತಮ್ಮ ಮನೆಗಳನ್ನು ಬಿಟ್ಟು ಹೊರಗಡೆ ಬರುವುದಕ್ಕೆ ಸಹ ಹೆದರುತ್ತಿದ್ದ ಸಂದರ್ಭದಲ್ಲಿ ತಮ್ಮ ಪ್ರಾಣ, ಕುಟುಂಬವನ್ನು ಎಲ್ಲಾವನ್ನು ಬಿಟ್ಟು ಸಾರ್ವಜನಿಕರ ಹಿತಕ್ಕಾಗಿ ಹಗಲು ರಾತ್ರಿ ದುಡಿದಿದ್ದಾರೆ ಎಂದರು.
ನಗರ ಸಭಾ ಕಾರ್ಯಾಲಯ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಹೊರಗುತ್ತಿಗೆದಾರರನ್ನು ಸರ್ಕಾರ ಈ ಕೂಡಲೇ ಖಾಯಂಗೊಳಿಸಬೆಕಾಗಿದೆ ಹಾಗೂ ಇವರ ಪರವಾಗಿ ಸಾರ್ವಜನಿಕರಾದ ನಾವುಗಳು ಸಹ ಕೈ ಜೋಡಿಸಬೇಕಾಗಿದೆ ಎಂಬುದಾಗಿ ಅಬ್ದುಲ್ ಅಜೀಜ್ ಸಾರ್ವಜನಿಕರಿಗೆ ಕರೆ ನೀಡಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಹೊರಗುತ್ತಿಗೆ ವಾಹನ ಚಾಲಕ ಸಂಘದ ಅಧ್ಯಕ್ಷರಾದ ಬಿ.ದಿವಾಕರ ಮಾತನಾಡಿ, ಇಂದು ಮೂರನೇಯ ದಿನದ ಮುಷ್ಕರ ಮುಂದುವರೆದಿದ್ದು, ನಗರದಲ್ಲಿ ತ್ಯಾಜ್ಯ ಸಾಗಿಸುವ ಕಸವನ್ನು ದಿನಕ್ಕೆ 30 ಲೋಡಿನಂತೆ ಮೂರು ದಿನಕ್ಕೆ ತೊಂಬತ್ತು ಲೋಡ್ ನಷ್ಟು ಕಸದ ಲೋಡು ಈಗಾಗಲೇ ಸಂಗ್ರಹವಾಗಿದ್ದು, ಹಿರಿಯೂರು ನಗರದ ಮೂವತ್ತೊಂದು ವಾರ್ಡ್ ಗಳಲ್ಲಿ ಈಗಾಗಲೇ ವಿಪರೀತ ಕಸ, ಕಸದಿಂದ ದುರ್ವಾಸನೆ ಮೂಗುಮುಚ್ವಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಸ್ಥಳೀಯ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದರಿಂದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅತಿ ಶೀಘ್ರದಲ್ಲಿ ತಮ್ಮ ಸಂಪುಟ ಸಭೆಯಲ್ಲಿ ಅತಿ ಶೀಘ್ರದಲ್ಲಿ ಗಣನೆಗೆ ತೆಗೆದುಕೊಂಡು ನಮ್ಮನ್ನು ಅತಿ ಶೀಘ್ರದಲ್ಲಿ ಪೌರಕಾರ್ಮಿಕರು, ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್ ಗಳು, ವಾಟರ್ ಮ್ಯಾನ್ ಗಳನ್ನು ಸರ್ಕಾರವು ಖಾಯಂಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಆರ್.ಎಲ್.ರಾಜಶೇಖರ್, ಪಿ.ವೀರೇಂದ್ರ, ವೈ.ಆರ್.ರಂಗನಾಥ್, ಅಭಿಷೇಕ್, ಕಾರ್ತಿಕ್ , ಡಿ.ಮಂಜುನಾಥ್, ಹನುಮಂತ, ಫಯಾಜ್, ಶ್ರೀನಿವಾಸ್, ಸಿದ್ದೇಶ್, ಷಫೀವುಲ್ಲಾ, ಚಂದ್ರಶೇಖರ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಗಳಾದ ಕಿರಣ್ ಕುಮಾರ್, ನೇತ್ರಾವತಿ, ಸ್ವಾಮಿ, ಆನಂದ್, ಫರ್ವಿತೇಜ್ , ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ಬಿ.ದುರ್ಗೇಶ್ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್ ಚಿತ್ರದುರ್ಗ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


