ಹೋರಿ ಹಬ್ಬದಲ್ಲಿ ಯುವಕನೊಬ್ಬ ಹೋರಿಯ ತಿವಿತಕ್ಕೊಳಗಾಗಿ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಹೊಸಳ್ಳಿ ಗ್ರಾಮದ ನಿವಾಸಿ ಷಣ್ಮುಖ (22) ಎಂದು ಗುರುತಿಸಲಾಗಿದೆ.
ಹಿರೇಕೆರೂರು ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಹೋರಿ ಹಬ್ಬ ನೋಡಲು ಬಂದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ರಾಜ್ಯಮಟ್ಟದ ಹೋರಿಗಳನ್ನು ಬೆದರಿಸುವ ಈ ಸ್ಪರ್ಧೆಗೆ ರಾಜ್ಯದ ಅನೇಕ ಕಡೆಗಳಿಂದ ಕೊಬ್ಬಿದ ಹೋರಿಗಳನ್ನು ತರಿಸಲಾಗಿತ್ತು. ಅಖಾಡದಲ್ಲಿ ಓಡುತ್ತಿದ್ದ ಹೋರಿಯನ್ನು ಷಣ್ಮುಖ ನೋಡುತ್ತಿದ್ದು, ಈ ಸಂದರ್ಭದಲ್ಲಿ ಹೋರಿಯೊಂದು ಈತನಿಗೆ ತಿವಿದಿದ್ದು, ಹೊರಿ ತಿವಿದ ರಭಸಕ್ಕೆ ಕೊಂಬು ಹೊಟ್ಟೆಗೇ ಹೊಕ್ಕಿದ್ದರಿಂದ ಸ್ಥಳದಲ್ಲೇ ಯುವಕ ಸಾವಿಗೀಡಾಗಿದ್ದಾನೆ. ಹಂಸಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


