ತುಮಕೂರು: ಮಾವು(Mango) ಹೂ ಮತ್ತು ಕಾಯಿ ಕಟ್ಟುವ ಸಮಯದಲ್ಲಿ ಮಾವು ಬೆಳೆಗಾರರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತೋಟಗಾರಿಕಾ ಇಲಾಖೆ ಸಲಹೆ ನೀಡಿದೆ.
ಮಾವಿನಲ್ಲಿ ರೋಗ ಮತ್ತು ಕೀಟ ಬಾಧೆಯನ್ನು ತಡೆಗಟ್ಟಲು ಮಾವಿನ ತೋಟಗಳನ್ನು ಸ್ವಚ್ಚವಾಗಿ ಇಡಬೇಕು. ಮಾವಿನ ಗಿಡಗಳ ಬುಡದಲ್ಲಿ ಕಳೆಗಳನ್ನು ತೆಗೆಯಬೇಕು.
ಹೂವು ಉದುರುವುದನ್ನು ತಡೆಗಟ್ಟಲು ಹೂವಿನ ಪ್ರಾರಂಭದ ಹಂತದಲ್ಲಿ ಪ್ರತಿ 25 ದಿನಕ್ಕೊಮ್ಮೆ ಪೊಟ್ಯಾಶಿಯಂ ನೈಟ್ರೇಟ್ (KNO3) 5 ಗ್ರಾಂ ಔಷಧಿಯನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಮಾವಿನ ಗಿಡದಲ್ಲಿ ಹೂ ಚೆನ್ನಾಗಿ ಕಚ್ಚಲು NAA (Planofix) ಸಸ್ಯ ಪ್ರಚೋದಕ 4 ಮಿ.ಲೀ. ಔಷಧಿಯನ್ನು 16 ಲೀ. ನೀರಿನಲ್ಲಿ ಬೆರೆಸಿ 15 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು. ಹೂವು ಮತ್ತು ಕಾಯಿ ಉದುರುವುದನ್ನು ತಡೆಗಟ್ಟಲು ಮಾವಿನ ಸ್ಪೆಷಲ್-05 ಗ್ರಾಂ ಔಷಧಿಯನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ 25 ದಿನಕ್ಕೊಮ್ಮೆ 3 ಬಾರಿ ಸಿಂಪಡಣೆ ಮಾಡಬೇಕು.
ಮಾವಿನ ಜಿಗಿ ಹುಳುವನ್ನು ಹತೋಟಿ ಮಾಡಲು ಬೇವಿನ ಎಣ್ಣೆ (Neem oil) (10000 PPM) 2 ಮಿ.ಲೀ. ಔಷಧಿಯನ್ನು ಒಂದು ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಮಾವಿನ ಬೂದಿರೋಗವನ್ನು ಹತೋಟಿ ಮಾಡಲು ಸಲ್ಫಾö್ಯಕ್ಸ್-2 ಗ್ರಾಂ ಅಥವಾ ಮ್ಯಾನ್ಕೋಜೆಬ್ 63% + Carbendazim 12%-2 ಗ್ರಾಂ ಔಷಧಿಯನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ತೋಟಗಾರಿಕೆ ಉಪ ನಿರ್ದೇಶಕಿ ಶಾರದಮ್ಮ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx