ತುರುವೇಕೆರೆ: ಸಮುದಾಯದ ಅಭಿವೃದ್ಧಿಗೆ ಹೊಸಹೊಸ ಯೋಜನೆಗಳ ಬಗ್ಗೆ ಚರ್ಚಿಸಿ ಅವರಲ್ಲಿ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಇದರಿಂದ ಈ ಗ್ರಾಮಕ್ಕೆ ಭೇಟಿ ನೀಡಿ ರಾಜಕೀಯೇತರವಾಗಿ ನಮ್ಮ ಸಮುದಾಯದವರೊಂದಿಗೆ ಮಾತನಾಡಲು ಬಂದಿದ್ದೇನೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ ತಿಳಿಸಿದರು.
ಕೊಟ್ಟೂರನ ಕೊಟ್ಟಿಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮುದಾಯದ ಉನ್ನತೀಕರಣಕ್ಕಾಗಿ ಯೋಜನೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಅವರು ಈ ಭಾಗದಲ್ಲಿ ಹೆಚ್ಚು ನಮ್ಮ ಸಮುದಾಯದ ಸಂಬಂಧಿಗಳಿರುವುದರಿಂದ ಆಗಾಗ್ಗೆ ಇಲ್ಲಿಗೆ ಭೇಟಿ ನೀಡಿ ಸಬಲೀಕರಣದ ಬಗ್ಗೆ ಸಂಬಂಧಿಕರೊಂದಿಗೆ ಸಮಾಲೋಚಿಸಲು ಹಾಗೆಯೇ ನಮ್ಮ ಸಮುದಾಯದ ಸಂಬಂಧಗಳ ಬೆಸೆಯುವ ನಿಟ್ಟಿನಲ್ಲಿ ಯುವಕರ ಇಲ್ಲಿಗೆ ಆಗಮಿಸಿರುವುದಾಗಿ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ತಿಳಿಸಿದರು.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಳ್ಕೊಳ್ಳೆ ಕಾರ್ಯಚಟುವಟಿಕೆಗಳನ್ನು ರೂಪಿಸುವ ದೃಷ್ಟಿಯಿಂದ ಮುಂದಿನ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಾನಿಂದು ಸಂಬಂಧಿಕರೊಂದಿಗೆ ಚರ್ಚಿಸಲು ಬಂದಿದ್ದೇನೆಯೇ ಹೊರತು ಮತ್ಯಾವುದೇ ರಾಜಕೀಯ ದುರುದ್ದೇಶದಿಂದ ಬಂದಿಲ್ಲ ಎಂದು ಹೇಳಿ ಹಾಗೆಯೇ ದೇವಸ್ಥಾನಗಳು, ಲೈಬ್ರೆರಿ, ಓದುವ ಕೊಠಡಿ, ಸಂಬಂಧಗಳು ಒಂದುಗೂಡಿಸುವ ನಿಟ್ಟಿನಲ್ಲಿ ಸಮುದಾಯದ ಅಭಿವೃದ್ಧಿಗೆ ಹೊಸಹೊಸ ಯೋಜನೆಗಳ ಬಗ್ಗೆ ಇವುಗಳಲ್ಲಿ ಸಮುದಾಯಕ್ಕಾಗಿ ಬ್ಯಾಂಕ್ , ವಿದ್ಯಾರ್ಥಿ ನಿಲಯಗಳ ಸ್ಥಾಪನೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ಸಾಧಕ ಬಾದಕದ ಹಾಗೂ ಮುಂತಾದವುಗಳ ಬಗ್ಗೆ ಚರ್ಚಿಸಿ ಅವರಲ್ಲಿ ಅರಿವು ಮೂಡಿಸಬೇಕಾಗಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮ ಇರುವಂತೆ ನಮ್ಮ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ ಇಂತಹ ವಿಚಾರಗಳ ಬಗ್ಗೆ ಚರ್ಚಿಸಲಿದ್ದೇನೆ ಎಂದರು.
ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತ್ ರಾಜ್ ಅವರನ್ನು ಭೇಟಿ ಮಾಡಿ ಅವರ ಗೆಲುವಿಗೆ ಶುಭಕೋರಿ ಬಂದಿರುವುದಾಗಿ ತಿಳಿಸಿದರಲ್ಲದೇ, ನಮ್ಮ ಕಾಂಗ್ರೆಸ್ ಪಕ್ಷದಿಂದ ಅತ್ಯುತ್ತಮವಾದ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಹಲವಾರು ಯೋಜನೆಗಳ ಬಗ್ಗೆ ನಾವು ವಾಗ್ದಾನ ಕೊಟ್ಟಿದ್ದೇವೆ. ನಮ್ಮ ಹಿಂದಿನ ಸರ್ಕಾರದಲ್ಲಿ ಕೊಟ್ಟಿದ್ದಂತೆ ವಾಗ್ದಾನಗಳನ್ನು ಕೊಟ್ಟಮಾತಿನಂತೆ ಈಡೇರಿಸಿದ್ದೇವೆ. ಹಾಗೆಯೇ ನಾವು ಘೋಷಣೆ ಮಾಡಿರುವ ಈಗಿನ ಕಾರ್ಯ ಯೋಜನೆಗೆ ಹಣಕಾಸು ಇಲಾಖೆ ಹಾಗೂ ನ್ಯಾಯವಾದಿಗಳು ಹಾಗು ತಜ್ಞರ ಜೊತೆ ಚರ್ಚಿಸಿ ಸುಮಾರು ಒಂದು ಲಕ್ಷ ಕೋಟಿ ಹಣ ಬೇಕಾಗಿದ್ದು ಎಲ್ಲೆಲ್ಲಿ ಸೋರಿಕೆಯಾಗಿದೆ ಅದನ್ನು ಉಳಿಸಿ ಅದನ್ನು ಈ ಯೋಜನೆಗಳ ಅನುಷ್ಟಾನಕ್ಕೆ ಬಳಸಲಿದ್ದೇವೆ ಹಾಗೂ ಪಾರದರ್ಶಕವಾಗಿ ಆಡಳಿತ ನಡೆಸಲಿದ್ದೇವೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಲೆ ಎದ್ದಿದ್ದು 160ಕ್ಕೂ ಹೆಚ್ಚು ಸೀಟು ಗೆಲ್ಲಲಿದ್ದು ರಾಜ್ಯದ ಚುಕ್ಕಾಣಿ ಹಿಡಿಯಲಿದ್ದೇವೆ ಇದು 100 ಕ್ಕೆ 100 ಸತ್ಯ ಎಂದರು.
ಈ ಸಂದರ್ಭದಲ್ಲಿ ಎಮ್ಮೆದೊಡ್ಡಿ ಜಯಣ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಎಲ್.ಶ್ರೀನಿವಾಸ್, ಮುಖಂಡರಾದ ಮಂಜಯ್ಯ, ಗೋವಿಂದಯ್ಯ, ಸಿದ್ದಪ್ಪ, ಜವರಪ್ಪ ನಾಗರಾಜ್, ದೇವರಾಜು, ಜಿತೇಂದ್ರ, ತಮ್ಮಣ್ಣ. ಕೃಷ್ಣಪ್ಪ ಪರಮೇಶ್, ಮಹಾಲಿಂಗಪ್ಪ, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy