ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ತಿಪಟೂರು ತಾಲ್ಲೂಕಿನ ಕೋಡಿಹಳ್ಳಿಯ ಹೋಟೆಲ್ ಸಿಬ್ಬಂದಿಯೊಬ್ಬರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ.
ಎಚ್.ಎಸ್.ಶಿವಕುಮಾರ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಆನ್ ಲೈನ್ ನಲ್ಲಿ ಕೆಲಸ ಮಾಡುತ್ತಾ ಹಣ ಗಳಿಸಬಹುದು ಎಂಬ ಜಾಹೀರಾತು ವೀಕ್ಷಿಸಿದ್ದಾರೆ. ನಂತರ ಯಾವ ಕೆಲಸ ಎಂದು ಮಸೇಜ್ ಮಾಡಿದ್ದಾರೆ. ಬಳಿಕ ಅವರ ನಂಬರ್ ಅನ್ನು “Wealth Group 605′ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರಿಸಲಾಗಿದೆ. ‘ನಾವು ಹೇಳಿದಂತೆ ಹಣ ವರ್ಗಾಯಿಸಿದರೆ, ಅದನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಿಮಗೆ ಲಾಭ ನೀಡುತ್ತೇವೆ’ ಎಂದು ಆರೋಪಿಗಳು ತಿಳಿಸಿದ್ದಾರೆ.
ವಂಚಕರ ಮಾತು ನಂಬಿದ ಶಿವಕುಮಾರ್ ಹಂತ ಹಂತವಾಗಿ ಒಟ್ಟು 14.08 ಲಕ್ಷ ವರ್ಗಾವಣೆ ಮಾಡಿದ್ದಾರೆ. ಹಣ ವಾಪಸ್ ಕೇಳಿದಾಗ “ಇನ್ನೂ 14 ಲಕ್ಷ ವರ್ಗಾಯಿಸಿದರೆ ಮಾತ್ರ ಪೂರ್ತಿ ಹಣ ನೀಡಲಾಗುವುದು’ ಎಂದಿದ್ದಾರೆ. ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ಮೋಸ ಆಗಿರುವುದು ಗೊತ್ತಾಗಿದೆ.
ಆಮಿಷ ನೀಡಿ, ವಿವಿಧ ಖಾತೆಗಳಿಗೆ ಹಣ ಹಾಕಿಸಿಕೊಂಡು ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.
ಜನರು ಆನ್ ಲೈನ್ ಮೋಸದ ಬಗ್ಗೆ ಪ್ರತಿ ನಿತ್ಯ ಸುದ್ದಿಗಳನ್ನು ನೋಡುತ್ತಿದ್ದಾರೆ, ಸರ್ಕಾರದ ಎಚ್ಚರಿಕೆ ಸಂದೇಶಗಳನ್ನು ನೋಡುತ್ತಿದ್ದಾರೆ. ಪೊಲೀಸರ ಮಾರ್ಗದರ್ಶನಗಳನ್ನೂ ನೋಡುತ್ತಿದ್ದಾರೆ. ಆದರೂ ಇನ್ನೂ ಇಂತಹ ವಂಚನಾ ಜಾಲಕ್ಕೆ ಬಲಿಯಾಗುತ್ತಿರುವುದು ದುರಂತ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


