ಬೆಂಗಳೂರು: ಜಿಟಿ ಜಿಟಿ ಮಳೆಯ ನಡುವೆಯೇ ಜೆ.ಜೆ.ನಗರದಲ್ಲಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ವಯೋವೃದ್ಧರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಸಹೋದರ ಸಹೋದರಿಯಾದ ಕಸ್ತೂರಿ ಹಾಗೂ ಲೋಕೇಶ್ ಎಂಬವರು ಅಪಾಯದಿಂದ ಪಾರಾದವರಾಗಿದ್ದಾರೆ. ರಾತ್ರಿ 12 ಗಂಟೆ ಸಮಯದಲ್ಲಿ ಏಕಾಏಕಿ ಮನೆ ಗೋಡೆ ಕುಸಿಯುತ್ತಿರುವುದನ್ನು ಕಂಡು ಇಬ್ಬರು ಜೋರಾಗಿ ಕೂಗಿಕೊಂಡರು.ಆದರೂ ಮನೆಯ ಛಾವಣಿಯ ಒಂದು ಭಾಗ ವೃದ್ಧರ ಮೇಲೆ ಬಿದ್ದಿತ್ತು. ತಕ್ಷಣ ಅಕ್ಕಪಕ್ಕದ ಮನೆಯವರು ಮನೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.
ಮಣ್ಣಿನ ಮನೆಯಾಗಿದ್ದರಿಂದ ಗೋಡೆ ಕುಸಿದುಬಿದ್ದಿದೆ ಎಂದು ತಿಳಿದುಬಂದಿದೆ. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸದ್ಯ ಪ್ರಾಣ ಉಳಿದರೂ ಜೀವಿಸಲು ಇದ್ದ ಮನೆಯನ್ನು ಕಳೆದುಕೊಂಡು ವೃದ್ಧ ಜೀವಗಳು ಕಣ್ಣೀರು ಹಾಕುತ್ತಿದ್ದು, ನಮಗೆ ಆಧಾರ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx


