ಬೀದರ್ : ಮನೆ ಬೀಗ ಮುರಿದು 6.80 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನಗೈದಿರುವ ಘಟನೆ ಬೀದರ್ ನಗರದ ಶಿವನಗರ ಬಡಾವಣೆಯಲ್ಲಿ ನಡೆದಿದೆ.
ಮೂಲತಃ ಆಂಧ್ರ ಪ್ರದೇಶದ ಒಡ್ದುಪಾಲಂ ಗ್ರಾಮದ ನಿವಾಸಿ ಶ್ರೀನಿವಾಸಲು ಅವರು ಕುಟುಂಬದೊಂದಿಗೆ ಸುಮಾರು 10 ವರ್ಷದಿಂದ ಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆ.16ರಂದು ಆಂಧ್ರ ಪ್ರದೇಶಕ್ಕೆ ಹೋದಾಗ ಶಿವನಗರದ ಬಾಡಿಗೆ ಮನೆಯ ಬಾಗಿಲು ಒಡೆದು 6. 84 ಲಕ್ಷ ಸಾವಿರ ರೂ. ಮೌಲ್ಯದ 76 ಚಿನ್ನದ ಆಭರಣಗಳು ಮತ್ತು 2 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಗರದ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC