ಇನ್ನೇನು ಕೆಲವು ದಿನಗಳಲ್ಲಿ ಜೂನ್ ತಿಂಗಳು ಮುಗಿದು ಜುಲೈ ತಿಂಗಳು ಆರಂಭವಾಗಲಿದೆ. ಸದ್ಯ ಪ್ರತಿ ತಿಂಗಳಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ತಿಂಗಳು ಜುಲೈ ನಲ್ಲಿ ಬ್ಯಾಂಕ್ ರಜೆ ಘೋಷಿಸಿದೆ.
ಮುಂದಿನ ತಿಂಗಳು, ಅಂದರೆ 2024ರ ಜುಲೈನಲ್ಲಿ 12 ದಿನಗಳು ಬ್ಯಾಂಕ್ ಗಳು ಬಂದ್ ಆಗಲಿವೆ. ಒಟ್ಟು ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾದಿನಗಳ ಕಾರಣ ಜುಲೈ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಇರಲಿದೆ.
ಇವುಗಳಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಇತರ ಕೆಲವು ದಿನಗಳನ್ನು ಆರ್ ಬಿಐ ಬ್ಯಾಂಕ್ ರಜೆ ಎಂದು ಘೋಷಿಸುತ್ತದೆ. ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕೆಲವು ರಾಷ್ಟ್ರೀಯ ರಜಾದಿನಗಳಲ್ಲಿ ಎಲ್ಲಾ ಬ್ಯಾಂಕುಗಳು ಕ್ಲೋಸ್ ಆಗಿರುತ್ತೆ. ಕೆಲವು ರಾಜ್ಯಗಳಲ್ಲಿ ಸ್ಥಳೀಯ ಹಬ್ಬಗಳ ಆಧಾರದ ಮೇಲೆ ಬ್ಯಾಂಕ್ ರಜಾದಿನಗಳನ್ನು ಹೊಂದಿವೆ.
ಜುಲೈ ತಿಂಗಳ ಬ್ಯಾಂಕ್ ರಜಾ ಪಟ್ಟಿ ಇಂತಿವೆ :
ಜುಲೈ 3: ಬೆಹ್ ದೈನ್ ಖ್ಲಾಮ್ ಸಂದರ್ಭದಲ್ಲಿ ಶಿಲ್ಲಾಂಗ್ ನಲ್ಲಿ ರಜೆ ಜುಲೈ 6: MHIP ದಿನದ ಸಂದರ್ಭದಲ್ಲಿ ಐಜ್ವಾಲ್ ನಲ್ಲಿ ರಜೆ ಜುಲೈ 7: ಭಾನುವಾರ
ಜುಲೈ 8: ಕಾಂಗ್ (ರಥಜಾತ್ರಾ) ಸಂದರ್ಭದಲ್ಲಿ ಇಂಫಾಲ್ ನಲ್ಲಿ ರಜೆ. ಜುಲೈ 9: ದ್ರುಪ್ಕಾ ಶಿಜಿಯ ಸಂದರ್ಭದಲ್ಲಿ ಗ್ಯಾಂಗ್ ಟಾಕ್ ನಲ್ಲಿ ರಜೆ
ಜುಲೈ 13: ಎರಡನೇ ಶನಿವಾರ ರಾಷ್ಟ್ರೀಯ ರಜಾದಿನವಾಗಿದೆ
ಜುಲೈ 14: ಭಾನುವಾರ
ಜುಲೈ 16: ಹರೇಲಾ ಸಂದರ್ಭದಲ್ಲಿ ಡೆಹ್ರಾಡೂನ್‌ನಲ್ಲಿ ರಜೆ
ಜುಲೈ 17: ಅಗರ್ತಲಾ, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚೆನ್ನೈ, ಹೈದರಾಬಾದ್ – ಆಂಧ್ರ ಪ್ರದೇಶ, ತೆಲಂಗಾಣ, ಜೈಪುರ, ಜಮ್ಮು, ಕಾನ್ಸುರ್, ಕೋಲ್ಕತ್ತಾ, ಮೊಹರಂ/ಅಶುರಾ/ಯು ತಿರೋತ್ ಸಿಂಗ್ ದಿನದಂದು. ಲಕ್ಷ್ಮೀ, ಮುಂಬೈ, ನಾಗುರ, ನವದೆಹಲಿ, ಪಾಟ್ನಾ, ರಾಯ್ಸುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರದಲ್ಲಿ ರಜೆ.
ಜುಲೈ 21: ಭಾನುವಾರ.
ಜುಲೈ 27: ನಾಲ್ಕನೇ ಶನಿವಾರ ರಾಷ್ಟ್ರವ್ಯಾಪಿ ರಜೆ
ಜುಲೈ 28: ಭಾನುವಾರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA