14 ವರ್ಷಗಳ ನಂತರ ಭಾರತ ತಂಡಕ್ಕೆ ಮತ್ತೊಮ್ಮೆ ಐಸಿಸಿ ಟಿ20 ವಿಶ್ವಕಪ್ ಸಿಕ್ಕಂತಾಗಿದೆ. ಹಾಗಾದ್ರೆ ಈಗ ಕಪ್ ಗೆದ್ದಿರುವ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಹಣ ಎಷ್ಟು ಕೋಟಿ? ಬಹುಮಾನದ ಹಣದಲ್ಲಿ ಯಾವ ಯಾವ ಆಟಗಾರರಿಗೆ ಎಷ್ಟು ಕೋಟಿ ರೂಪಾಯಿ ಹಣ ಹಂಚಿಕೆ ಆಗಲಿದೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಭಾರತ ತಂಡಕ್ಕೆ ಒಟ್ಟಾರೆ 20 ಕೋಟಿ 40 ಲಕ್ಷ ರೂಪಾಯಿಗು ಹೆಚ್ಚು ಹಣ ಬಹುಮಾನದ ರೂಪದಲ್ಲಿ ಸಿಕ್ಕಿದೆ. ಫೈನಲ್ ಪಂದ್ಯದಲ್ಲಿ ಸೋತ ದಕ್ಷಿಣ ಆಫ್ರಿಕಾಗೆ 10 ಕೋಟಿ 68 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಇನ್ನು ಭಾರತ ತಂಡಕ್ಕೆ ಈಗ ಸಿಕ್ಕಿರುವ 20 ಕೋಟಿ 42 ಲಕ್ಷ ರೂಪಾಯಿ ಹಣದಲ್ಲಿ ತಂಡದ ಪ್ರತಿಯೊಬ್ಬ ಆಟಗಾರ, ಕೋಚ್, ಸಹಾಯಕ ಸಿಬ್ಬಂದಿ ಸೇರಿದಂತೆ ತಂಡದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಇಷ್ಟು ಅಂತಾ ಹಣ ಸಿಗಲಿದೆ. ಇದು ಕೇವಲ ಆ ತಂಡಕ್ಕೆ ಸಿಗುವ ಹಣವಾಗಿದ್ದರೆ, ಮ್ಯಾನ್ ಆಫ್ ದಿ ಸೀರಿಸ್, ಅತಿಹೆಚ್ಚು ವಿಕೆಟ್ ತೆಗೆದ ಬಹುಮಾನ, ಅತಿಹೆಚ್ಚು ರನ್ ಗಳಿಸಿದ ಬಹುಮಾನ ಪ್ರತ್ಯೇಕವಾಗಿ ಸಿಗಲಿದೆ.
2022ರಲ್ಲಿ ನಡೆದ ವಿಶ್ವಕಪ್‌ಗೆ ಹೋಲಿಸಿದರೆ ಬಹುಮಾನದ ಮೊತ್ತ ದುಪ್ಪಟ್ಟಾಗಿದೆ. ಏಕೆಂದರೆ ಎರಡು ವರ್ಷಗಳ ಹಿಂದೆ ವಿಶ್ವಕಪ್ನ ಬಹುಮಾನದ ಒಟ್ಟು ಮತ್ತು 46.6 ಕೋಟಿ ರೂಪಾಯಿ ಆಗಿತ್ತು. ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡಕ್ಕೆ 13.3 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಸೆಮಿ ಫೈನಲ್ನಲ್ಲಿ ಸೋತ ತಂಡಗಳಿಗೆ ತಲಾ 6.5 ಕೋಟಿ ರೂಪಾಯಿ ಸಿಕ್ಕಿದೆ. ಸೆಮಿಫೈನಲ್ ತಂಡಗಳಲ್ಲದೇ ಸೂಪರ್-8 ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗದ 4 ತಂಡಗಳಿಗೂ ಸಾಕಷ್ಟು ಹಣವನ್ನು ನಿಗದಿಪಡಿಸಲಾಗಿದೆ.
ಭಾಗವಹಿಸಿದ ಎಲ್ಲಾ ತಂಡಗಳಿಗೆ ಬಹುಮಾನ ಮೊತ್ತ ಸಿಗಲಿದೆ. ಅದರ ವಿವರ ಇಲ್ಲಿದೆ:
ವಿಜೇತರು: ₹20,42,49,000
ರನ್ನರ್ಸ್ ಅಪ್; ₹10,68,06,400
ಸೋತ ಸೆಮಿ–ಫೈನಲಿಸ್ಟ್ ಗಳು: ₹6,58,07,250
2ನೇ ಸುತ್ತಿನಲ್ಲಿ ಸೋತ ತಂಡಗಳು ₹ 3,19,50,750
9 ರಿಂದ 12 ನೇ ಸ್ಥಾನ: ₹ 2,06,90,250
13 ರಿಂದ 20ನೇ ಸ್ಥಾನ; ₹1,87,65,000
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA