ತುಮಕೂರು: ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜಿಲ್ಲೆಯ ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠ ಸ್ಪಟಿಕಪುರಿ ಮಹಾ ಸಂಸ್ಥಾನದಲ್ಲಿ ಜನವರಿ 20ರಂದು ಬೆಳಿಗ್ಗೆ 9 ಗಂಟೆಗೆ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಶ್ವಾನ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಆಸಕ್ತ ಶ್ವಾನಪಾಲಕರು ಜನವರಿ 18ರೊಳಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತುಮಕೂರು ಮೊ.ಸಂ. 9448769650/ 8494830759/ 968678797/ 7559912315/ 9880561094, ತುರುವೇಕೆರೆ-9945533787, ಕೊರಟಗೆರೆ-9964677451, ಚಿಕ್ಕನಾಯಕನಹಳ್ಳಿ-9945510509, ಶಿರಾ-9880313812, ಮಧುಗಿರಿ-9535966048, ಪಾವಗಡ-9742876225, ಗುಬ್ಬಿ-9449173655, ತಿಪಟೂರು-9448431987ನ್ನು ಸಂಪರ್ಕಿಸಬೇಕೆAದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ವಾನ ಪ್ರದರ್ಶನದ ಪ್ರಯುಕ್ತ ಸಾಕು ನಾಯಿಗಳ ಆರೋಗ್ಯ ರಕ್ಷಣೆ, ಸಾಕಾಣಿಕೆ ಬಗ್ಗೆ ಪ್ರಾಣಿ ತಜ್ಞರಿಂದ ವಿಚಾರ ವಿನಿಮಯವನ್ನು ನಡೆಸಲಾಗುವುದು. ಈ ಪ್ರದರ್ಶನದಲ್ಲಿ 25ಕ್ಕೂ ಅಧಿಕ ವಿವಿಧ ತಳಿಗಳ ಶ್ವಾನಗಳು ರಾಜ್ಯದ ವಿವಿಧೆಡೆಯಿಂದ ಭಾಗವಹಿಸಲಿವೆ.
ಪ್ರದರ್ಶನಕ್ಕೆ ಸಾಕು ನಾಯಿಗಳನ್ನು ಕರೆತರುವವರು ಮುಂಜಾಗ್ರತೆಯಾಗಿ ತಮ್ಮ ಶ್ವಾನಗಳಿಗೆ ಎಲ್ಲಾ ರೋಗಗಳ ವಿರುದ್ಧ ಲಸಿಕೆ ಹಾಕಿಸಿರಬೇಕು. ಸೂಕ್ತ ಜಂತುನಾಶಕ ಔಷಧಿ ಕುಡಿಸಬೇಕು ಹಾಗೂ ಕಿವಿಯನ್ನು ಸ್ವಚ್ಛಗೊಳಿಸಿರಬೇಕು. ಚರ್ಮದ ಮೇಲೆ ಇರಬಹುದಾದ ಉಣ್ಣೆ, ಹೇನು, ಚಿಗಟಗಳಿಗೆ ಸೂಕ್ತ ಔಷಧೋಪಚಾರ ಮಾಡಿಸಿರಬೇಕು. ಉಗುರುಗಳನ್ನು ಕತ್ತರಿಸಿ ಮೊಂಡು ಮಾಡಿರಬೇಕು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx