ತುಮಕೂರು: ವಿನಾಯಕ ನಗರದ ಗಣಪತಿ ದೇವಸ್ಥಾನದ ಮುಂಭಾಗ, ಹೊಯ್ಸಳ ರಾಜ ವಿಷ್ಣುವರ್ಧನ ಕನ್ನಡ ವೇದಿಕೆ ವತಿಯಿಂದ 4ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಧ್ವಜಾರೋಹಣ ಮಾಡುವುದರ ಮೂಲಕ, ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆಚರಿಸಲಾಯಿತು.
ನ.5 ರಂದು ಸಂಜೆ 6.30ಕ್ಕೆ ಶಂಕರ್ ಮೆಲೋಡಿಸ್ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದು ಪ್ರಜಾ ಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ರವರು ಜ್ಯೋತಿಯನ್ನು ಬೆಳಗುವ ಮೂಲಕ ಚಾಲನೆ ನೀಡಿದರು.
ಸಾವಿರ ಚಿತ್ರಗಳ ಸರದಾರ ಹಿರಿಯ ಕಲಾವಿದರಾದ ಹೊನವಳ್ಳಿ ಕೃಷ್ಣ ರವರು ಕನ್ನಡ ಭಾಷೆ ನುಡಿ ಹಾಗೂ ಕಾರ್ಯಕ್ರಮದ ಬಗ್ಗೆ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಪೂರ್ತಿ ಡೆವೆಲಪರ್ಸ್ ಮಾಲೀಕರಾದ ಚಿದಾನಂದ ರವರು ಹಿರಿಯ ಮುಖಂಡರಾದ ಪ್ರಸನ್ನ ಪಚ್ಚಿ, ಜೋಡೆತ್ತು ನಾಗರಾಜು, ಮಧುಸೂದನ್, ಜಿಯ ಉಲ್ಲಾ, ಎಸ್ ಎಲ್ ವಿ ಫರ್ನಿಚರ್ಸ್ ಮಾಲೀಕರಾದ ಶಂಕರ್,ರವರು ಹಾಗೂ ಹೊಯ್ಸಳ ರಾಜ ವಿಷ್ಣುವರ್ಧನ ಕನ್ನಡ ವೇದಿಕೆಯ ಅಧ್ಯಕ್ಷರಾದ ಲೋಕೇಶ್, ಗೌರವ ಅಧ್ಯಕ್ಷರಾದ ಹೈಟೆಕ್ ರಾಜು,ಕಿರಣ್ ರಾವ್, ಪದಾಧಿಕಾರಿಗಳಾದ ಕುಮಾರ್, ಶಿವರಾಜು, ಪ್ರಕಾಶ್, ಕೀರ್ತಿ, ಮುಜು, ಇನ್ನು ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


