ಶಿವಾಜಿನಗರ ಠಾಣೆ ವ್ಯಾಪ್ತಿಯ ಕಂಟೋನ್ಮಂಟ್ ರೈಲು ನಿಲ್ದಾಣ ಬಳಿ ಪತ್ರಿಕಾ ವಿತರಕ ಆಂಥೋನಿ ಸಿ. (75) ಅವರನ್ನು ಅಡ್ಡಗಟ್ಟಿ ತೊಡೆಗೆ ಚಾಕುವಿನಿಂದ ಇರಿಯಲಾಗಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲಸೂರು ಠಾಣೆ ವ್ಯಾಪ್ತಿಯ ಸರಸ್ವತಿಪುರದಲ್ಲಿ ಪತ್ರಿಕಾ ವಿತರಕರೊಬ್ಬರನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಪ್ರಕರಣದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಪೊಲೀಸರು ಸಮರ್ಪಕವಾಗಿ ಗಸ್ತು ತಿರುಗುತ್ತಿಲ್ಲವೆಂಬ ಆರೋಪ ವ್ಯಕ್ತವಾಗಿದೆ.


