ದೇವನಹಳ್ಳಿ: ಕ್ಷೇತ್ರದ ಮಾಜಿ ಶಾಸಕ ವೆಂಕಟಸ್ವಾಮಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಅವರಿಗೆ 53-ವರ್ಷ ವಯಸ್ಸಾಗಿತ್ತು. ಕುಟುಂಬ ಮೂಲಗಳ ಪ್ರಕಾರ ಅವರು ಕಳೆದ ಕೆಲ ವಾರಗಳಿಂದ ಪದೇಪದೆ ಎದೆನೋವಿನಿಂದ ಬಳಲುತ್ತಿದ್ದರು ಮತ್ತು ಎರಡು ಬಾರಿ ಚಿಕಿತ್ಸೆಯೂ ಕೊಡಿಸಲಾಗಿತ್ತು.
ಕಳೆದ ರಾತ್ರಿ ಅವರು ತೀವ್ರ ಎದೆನೋವಿಗೊಳಗಾಗಿದ್ದರಿಂದ ಕೂಡಲೇ ಅವರನ್ನು ನಾರಾಯಣ ಹೃದಯಾಲಯದಲ್ಲಿ ದಾಖಲಿಸಲಾಗಿದೆ. ದುರದೃಷ್ಟಶಾತ್ ಅವರನ್ನು ಉಳಿಸುವುದು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದ ವೆಂಕಟಸ್ವಾಮಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಬಯಸಿದ್ದರು. ಆದರೆ ಟಿಕೆಟ್ ಸಿಗದ ಕಾರಣ ತೀವ್ರವಾಗಿ ನೊಂದುಕೊಂಡಿದ್ದರು. ಹೃದಯಾಘಾತಕ್ಕೆ ಅದು ಕೂಡ ಕಾರಣವಾಯಿತು ಅಂತ ಅವರ ಬೆಂಬಲಿಗರು ವಿಷಾದದಿಂದ ಹೇಳುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


