ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಣ್ಣ ವಯಸ್ಸಿನ ಯುವಕರೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇಂದೋರ್ ನಲ್ಲಿ ನಡೆದ ಘಟನೆಯೊಂದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದೋರ್ ನಲ್ಲಿ ನಡೆದಿದ್ದು, ವ್ಯಾಯಾಮ ಮಾಡುತ್ತಿದ್ದ ವೇಳೆಯೇ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಹೋಟೆಲ್ ಮಾಲೀಕರಾದ ಪ್ರದೀಪ್ ರಘುವಂಶಿ ಎಂಬವರು ಮೃತಪಟ್ಟವರಾಗಿದ್ದು, ಅವರು ಕುಸಿದು ಬಿದ್ದ ವೇಳೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
ಪ್ರದೀಪ್ ರಘುವಂಶಿ ನಮ್ಮ ಹಳೆಯ ಕ್ಲೈಂಟ್ ಆಗಿದ್ದಾರೆ. ಅವರು ಪ್ರತಿದಿನ ಜಿಮ್ ಗೆ ಬರುತ್ತಿದ್ದರು ಎಂದು ತರಬೇತುದಾರರು ಹೇಳಿದ್ದು, ಘಟನೆಯ ಬಗ್ಗೆ ವಿವರಿಸಿದ ಅವರು, ಪ್ರದೀಪ್ ಇದ್ದಕ್ಕಿಂದ್ದಂತೆ ಹೃದಯಾಘಾತಕ್ಕೆ ಒಳಗಾದರು. ಮೂರು ನಿಮಿಷಗಳಲ್ಲಿ ಎಲ್ಲವೂ ಮುಗಿದುಹೋಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
जिम में वर्कआउट के दौरान हार्ट अटैक के मामले देशभर में बढ़ते जा रहे है, ऐसा ही एक मामला इंदौर से सामना आया है। यहां एक होटल संचालक की जिम में हार्ट अटैक से मौत हो गई, कैमरे में कैद हुआ शॉकिंग मंजर।#Indore #latestnews #lucknowkibaat32 pic.twitter.com/oXOj4LHDyO
— लखनऊ की बात (@Lucknowkibaat32) January 5, 2023
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


