ಹುಬ್ಬಳ್ಳಿ: ನಿಮ್ಮ ಕ್ರೆಡಿಟ್ ಕಾರ್ಡ್ ಕ್ಯಾಶ್ ಬ್ಯಾಕ್ ಬಂದಿದೆ ಎಂದು ನಗರದ ಉಣಕಲ್‌ನ ಬ್ಯಾಂಕ್ ಉದ್ಯೋಗಿಗೆ ಮೊಬೈಲ್‌ಗೆ ಲಿಂಕ್ ಕಳುಹಿಸಿ ಬ್ಯಾಂಕ್ ಮಾಹಿತಿ ಪಡೆದ ವಂಚಕರು 3.12 ಲಕ್ಷ ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದಾನೆ.
ಕ್ರೆಡಿಟ್ ಕಾರ್ಡ್‌ಗೆ 6 ಸಾವಿರ ಕ್ಯಾಶ್ ಬ್ಯಾಕ್ ಬಂದಿದ್ದು, ಅದನ್ನು ಪಡೆಯಲು ಲಿಂಕ್ ಒತ್ತಿ ಮಾಹಿತಿ ಭರ್ತಿ ಮಾಡಬೇಕು ಎಂದು ಮಹಾಂತೇಶ ಅವರ ಮೊಬೈಲ್‌ಗೆ ವಂಚಕ ಲಿಂಕ್ ಸಮೇತ ಸಂದೇಶ ಕಳುಹಿಸಿದ್ದ.
ಅದನ್ನು ನಂಬಿದ ಅವರು ಆನ್‌ಲೈನ್‌ನಲ್ಲಿ ಈ-ಮೇಲ್ ಐಡಿ, ಫೋನ್ ನಂಬರ್, ಕ್ರೆಡಿಟ್ ಕಾರ್ಡ್ ನಂಬರ್ ಭರ್ತಿ ಮಾಡಿದ್ದಾರೆ. ಅದಾದ ಕೆಲವೇ ಸಮಯದಲ್ಲಿ ವಂಚಕ ಅವರ ಬ್ಯಾಂಕ್ ಖಾತೆಯಿಂದ ಏಳು ಬಾರಿ ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy