ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸದಾ ವಿವಾದಾತ್ಮಕ ವಿಡಿಯೋಗಳೇ ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ವೀಕ್ಷಣೆಗೊಳಪಡುತ್ತವೆ.
ಇದೀಗ ರೈಲಿನಲ್ಲಿ ಕಣ್ಸನ್ನೆಯೊಂದಿಗೆ ಆರಂಭವಾದ ಪ್ರೇಮ, ಲವ್ ಲೆಟರ್ ವರೆಗೆ ಮುಂದುವರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೊದಲ ನೋಟದ ಪ್ರೇಮ ಅನ್ನೋವಂತಹ ಪ್ರೇಮ ಪ್ರಕರಣ ಇದಾಗಿದ್ದು, ಚಲಿಸುವ ರೈಲಿನಲ್ಲಿ ಹುಡುಗ ಮತ್ತು ಹುಡುಗಿ ಪರಸ್ಪರ ಕಣ್ಸನ್ನೆ ಮೂಲಕವೇ ಮಾತನಾಡುತ್ತಾ, ವಿಚಾರ ವಿನಿಮಯ ಮಾಡುತ್ತಿದ್ದಾರೆ.
ಹುಡುಗ ಪದೇ ಪದೇ ಹುಡುಗಿಯನ್ನು ನೋಡುತ್ತಾ ನಗುತ್ತಿರುತ್ತಾನೆ. ಎಲ್ಲರೂ ನೋಡುತ್ತಿರುವುದನ್ನು ಕಂಡ ಹುಡುಗಿ ಕೊಂಚ ಸಂಕೋಚದಿಂದಲೇ ನೋಡುತ್ತಿರುತ್ತಾಳೆ. ಆದರೆ ಹುಡುಗ ಎದುರಿಕೆ ಸಿಕ್ಕ ತಕ್ಷಣವೇ ಲವ್ ಲೆಟರ್ ಕೊಟ್ಟೇ ಬಿಡುತ್ತಾಳೆ.
ಈ ವಿಡಿಯೋ ನೋಡಿದವರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದೆಲ್ಲ, ಕೇವಲ ಆಕರ್ಷಣೆ ಅಷ್ಟೇ ಇದು ರಿಯಲ್ ಲೈಫ್ ಅಲ್ಲ ಎಂದರೆ, ಇನ್ನು ಕೆಲವರು, ಇದು ಸಿನಿಮಾ ಕಥೆಯನ್ನೂ ಹೋಲುವ ಪ್ರೇಮಾ ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz