ಕೊರಟಗೆರೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ರವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ಡಾ.ಜಿ.ಪರಮೇಶ್ವರ ರವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಮಠಾಧೀಶರುಗಳು, ಸಾರ್ವಜನಿಕರು ಬೃಹತ್ ಪ್ರತಿಭಟನಾ ರ‍್ಯಾಲಿ ಪಟ್ಟಣದಲ್ಲಿ ನಡೆಸಿದರು.
ಕರ್ನಾಟಕ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಜೋರಾಗುತ್ತಿದ್ದಂತೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಡಾ.ಜಿ.ಪರಮೇಶ್ವರ ರವರ ಅಭಿಮಾನಿಗಳು ಬೃಹತ್ ಮೆರವಣಿಗೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಕೊರಟಗೆರೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಪ್ರಧಾನ ರಸ್ತೆ ಮೂಲಕ ಮುಖ್ಯ ಬಸ್ ಸ್ಟ್ಯಾಂಡ್ ವೃತ್ತದವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ಯುವಕರು ಬೈಕ್ ರ‍್ಯಾಲಿಯೊಂದಿಗೆ ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ರರೇ ಆಗಬೇಕು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೆ ಮೊದಲ ಆದ್ಯತೆ ಡಾ.ಜಿ.ಪರಮೇಶ್ವರ್ ರವರಿಗೆ ನೀಡಬೇಕೆಂದು ಘೋಷಣೆ ಕೂಗಿದರು, ಮೆರವಣಿಗೆಯಲ್ಲಿ ಮಹಿಳೆಯರು ಬಹುದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಡಾ.ಜಿ.ಪರಮೇಶ್ವರರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೇ ಬೇಕು, ಕಾಂಗ್ರೆಸ್ ಪಕ್ಷಕ್ಕಾಗಿ ಅವರು ಸಾಕಷ್ಟು ದುಡಿದಿದ್ದಾರೆ, ತ್ಯಾಗ ಮಾಡಿದ್ದಾರೆ, ಸಜ್ಜನ ರಾಜಕಾರಣಿಯಾದ ಅವರನ್ನು ದಲಿತ ನಾಯಕ ಎಂಬುವ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹೊರಗಿಡಲಾಗಿದೆ, ಇದು ಸಂವಿಧಾನಕ್ಕೆ ಮಾಡಿರುವ ಮೋಸವಾಗಿದ್ದು ಡಾ.ಜಿ.ಪರಮೇಶ್ವರ ರವರನ್ನು ಕೂಡಲೆ ಮುಖ್ಯಮಂತ್ರಿ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಮಠಾಧೀಶರುಗಳು ಆಗ್ರಹಿಸಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಣೆಯ ಕೂಗು ಜೋರಾಗಿ ಕೇಳಿ ಬರುತ್ತಿದೆ, ಕರ್ನಾಟಕದಲ್ಲಿ ಇಲ್ಲಿಯವರೆಗೂ ದಲಿತರು ಮುಖ್ಯಮಂತ್ರಿಯಾಗಿಲ್ಲ ಡಾ.ಜಿ.ಪರಮೇಶ್ವರ ರವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದಿದ್ದಾರೆ, ಅವರ ಸೇವಾಮನೂಭಾವ, ಸಜ್ಜನಿಕೆ, ಉತ್ತಮ ರಾಜಕಾರಣಿ ಎನ್ನುವ ಅಭಿಪ್ರಾಯದೊಂದಿಗೆ ದೆಹಲಿಯ ವರೀಷ್ಠರು ಅವರನ್ನು ದಲಿತ ಮುಖ್ಯಮಂತ್ರಿ ಎನ್ನುವ ನ್ಯಾಯದೊಂದಿಗೆ ಇವರನ್ನು ಪರಿಗಣಿಸಬೇಕು, ತುಮಕೂರು ಜಿಲ್ಲೆಯ ಪ್ರಬಲ ನಾಯಕರಾದ ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿಯಾದರೆ ತುಮಕೂರು ಜಿಲ್ಲೆಗೂ ಸಹ ಆದ್ಯತೆ ನೀಡಿದಂತಾಗುತ್ತದೆ ಅವರ ಮೇಲೆ ಪ್ರೀತಿ ಇರುವ, ಆಶೀರ್ವಾದ ಇರುವ, ಮುಖ್ಯಮಂತ್ರಿ ಆಗಬೇಕು ಎಂಬ ಅಭಿಲಾಷೆ ಇರುವ ಹಲವು ಸ್ವಾಮೀಜಿಗಳು ಅವರ ಪರ ಬೆಂಬಲವಾಗಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಇದನ್ನು ರಾಜ್ಯ ಸರ್ಕಾರ ಮತ್ತು ದೆಹಲಿಯ ವರಿಷ್ಠರು ಗಂಭೀರವಾಗಿ ಪರಿಗಣಿಸಿ ಡಾ.ಜಿ.ಪರಮೇಶ್ವರ ರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಆಟವಿ ಮಠದ ಶಿವಲಿಂಗ ಮಹಾ ಸ್ವಾಮೀಜಿ, ಆದಿ ಜಾಂಬವ ಮಠದ ಷಡಕ್ಷರಿ ಮಹಾ ಮುನಿ ಸ್ವಾಮೀಜಿ, ಬಸವ ಮಹಾಲಿಂಗ ಸ್ವಾಮೀಜಿ, ನವಗ್ರಹ ಲಕ್ಷ್ಮೀಶ್ವರಿ ಮಠದ ನಾಗೇಂದ್ರ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮಂಜುಳಾ, ಕವಿತಾ, ವೆಂಕಟೇಶ್, ಕೆಪಿಸಿಸಿ ಸದಸ್ಯರುಗಳಾದ ಪ್ರಸನ್ನಕುಮಾರ್, ಎ.ಡಿ.ಬಲರಾಮಯ್ಯ, ರಜಾಕ್‌ಸಾಬ್, ಮಹಾಲಿಂಗಪ್ಪ, ಬೂಚನಹಳ್ಳಿ ಬಿ.ಎಸ್.ದಿನೇಶ್, ಓಬಳರಾಜು, ಕೆ.ವಿ.ಮಂಜುನಾಥ್, ಗಣೇಶ್, ಕೆಂಪಣ್ಣ, ವಿನಯ್ ಕುಮಾರ್, ಗೊಂದಿಹಳ್ಳಿ ರಂಗರಾಜು, ಭೈರೇಶ್, ಕಾರ್ ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


