ಕೊರಟಗೆರೆ: ‘ಹುಲಿಬೇಟೆ’ ಚಿತ್ರವು ಇದೇ ಶುಭ ಶುಕ್ರವಾರದಂದು ರಾಜ್ಯಾದ್ಯಂತ ಏಕಕಾಲದಲ್ಲಿ 30 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡವು ಹೇಳಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರತಂಡ, ಕೊರೊನ ಎಂಬ ಮಹಾಮಾರಿಯಿಂದ ಹುಲಿ ಬೇಟೆ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದ್ದು, ಇದೇ ಶುಭ ಶುಕ್ರವಾರದಂದು ರಾಜ್ಯದ್ಯಂತ ಏಕಕಾಲದಲ್ಲಿ 30 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.
ಸ್ಥಳೀಯ ಪ್ರತಿಭೆಗಳು ನಿರ್ಮಿಸಿ ನಟಿಸಿರುವ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಸ್ಥಳೀಯ ಪ್ರತಿಭೆಗಳನ್ನು ಅರಸಿ ಆಶೀರ್ವದಿಸಿ ಎಂದು ಚಿತ್ರತಂಡದ ಕಲಾವಿದರು ಕೇಳಿಕೊಂಡರು.
ಹುಲಿಬೇಟೆ ಚಿತ್ರದ ನಾಯಕ ವಿಶ್ವನಾಥ್ ಚೌಹಾಣ್ ಮಾತನಾಡಿ, ಹುಲಿ ಬೇಟೆ ಚಿತ್ರವು ರಾಯರ ಸನ್ನಿಧಾನದಲ್ಲಿ ಮುಹೂರ್ತವನ್ನು ಮುಗಿಸಿ ಕೊರಟಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಿದ್ದು, ಹುಲಿ ಬೇಟೆ ಚಿತ್ರವು ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದು, ಈ ಚಿತ್ರವು ಸಂಪೂರ್ಣ ಸಂಸಾರಿಕ ಹಾಗೂ ಪ್ರೀತಿ ವಾತ್ಸಲ್ಯದ ಚಿತ್ರವಾಗಿದ್ದು ಚಿತ್ರ ನೋಡುವ ವೀಕ್ಷಕರಿಗೆ ಸಂಪೂರ್ಣ ಇಷ್ಟವಾಗುತ್ತದೆ ಎಲ್ಲರೂ ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ಸ್ಥಳೀಯ ಪ್ರತಿಭೆಗಳನ್ನ ಅರಸಿ ಆಶೀರ್ವದಿಸಿ ಎಂದು ಕೇಳಿಕೊಂಡರು
ಹುಲಿಬೇಟೆ ಚಿತ್ರದ ಸಂಪೂರ್ಣ ಚಿತ್ರೀಕರಣ ಮಾಡಿದ ಛಾಯಾಗ್ರಾಹಕ ಧನಪಾಲ್ ರಾಜ್ ಮಾತನಾಡಿ, ಈ ಚಿತ್ರವು ಕರ್ನಾಟಕದ ವಿವಿಧ ಪ್ರಕೃತಿಯ ಸೊಬಗಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದು, ಸುಂದರವಾಗಿ ಮೂಡಿ ಬಂದಿದೆ ಇದೆಲ್ಲದಕ್ಕೂ ಮಿಗಿಲಾದದ್ದು ಚಲನಚಿತ್ರ ನಟ ಮಾಸ್ಟರ್ ಆನಂದ್ ರವರು 11 ದಿನಗಳ ಕಾಲ ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಕನ್ನಡದ ಪ್ರತಿಭೆಗಳು ಬೆಳೆಯಬೇಕು ಎನ್ನುವ ಉದ್ದೇಶದಿಂದ ಉಚಿತವಾಗಿ ಒಂದು ಅದ್ಭುತವಾದ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನು ಈ ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಭೆಗಳು ಸಂಪೂರ್ಣ ಹೊಸಬರ ತಂಡ ವಾಗಿದ್ದು ಈ ಒಂದು ಪ್ರತಿಭೆಗಳ ತಂಡವು ಬೆಳೆಯಬೇಕು ಅದರ ಜೊತೆಗೆ ಹುಲಿ ಬೇಟೆ ಚಿತ್ರವು ಯಶಸ್ವಿಯಾಗಬೇಕು ಆದ್ದರಿಂದ ಕರುನಾಡಿನ ಕನ್ನಡ ಚಿತ್ರದ ಪ್ರೇಮಿಗಳು ಆರಾಧಕರು ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ ಅರಸಿ ಆಶೀರ್ವದಿಸಿ ಎಂದು ಕೇಳಿಕೊಂಡರು.
ಇನ್ನು ಕೊರಟಗೆರೆ ಸ್ಥಳೀಯ ಪ್ರತಿಭೆ ಹೈಯತ್ ಖಾನ್ ಮಾತನಾಡಿ, ಅನೇಕ ವರ್ಷಗಳಿಂದಲೂ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿಕೊಂಡು ಬಂದಿದ್ದೇನೆ. ಇದೀಗ ಹುಲಿ ಬೇಟೆ ಎನ್ನುವ ಚಲನಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಹುಲಿ ಬೇಟೆ ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ತಾಲೂಕಿನ ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಹೆಸರು ಮಾಡಲು ಹೊರಟಿದ್ದೇವೆ ಹುಲಿ ಬೇಟೆ ಚಿತ್ರವನ್ನು ತಾವೆಲ್ಲರೂ ಚಿತ್ರಮಂದಿರದಲ್ಲಿ ಬಂದು ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಇನ್ನು ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತ ನಿರ್ದೇಶಕ ರಾಜ್ ಬಹದ್ದೂರ್, ಕನ್ನಡ ಚಿತ್ರರಂಗದಲ್ಲಿ ಸುಮಾರು 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಈ ಚಿತ್ರವು ನಮ್ಮ ಕರುನಾಡಿನ ವಿಶೇಷ ಸ್ಥಳಗಳಾದ ಯಾದಗಿರಿ,. ಶಹಪುರ್, ರಾಯಚೂರು, ಬೆಂಗಳೂರು, ತುಮಕೂರು ಸೇರಿದಂತೆ ಕೊರಟಗೆರೆಯ ಸುಪ್ರಸಿದ್ಧ ಕ್ಷೇತ್ರಗಳಾದ ಗೊರವನಹಳ್ಳಿ, ಸಿದ್ದರಬೆಟ್ಟ, ನವಿಲುಕುರಿಕೆ ಸೇರಿದಂತೆ ಅನೇಕ ಪ್ರವಾಸಿಗರತನದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ. ಹುಲಿ ಬೇಟೆ ಚಿತ್ರ ತಂಡದ ನಾಯಕ ನಟ ವಿಶ್ವನಾಥ್ ಚೌಹಾಣ್, ನಿರ್ದೇಶಕ ನಿರ್ಮಾಪಕ ರಾಜ್ ಬಹದ್ದೂರ್, ಧನಪಾಲ್ ರಾಜ್, ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿರುವ ಆಯತ್ ಖಾನ್ ಸೇರಿದಂತೆ ಅನೇಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz