ಪಾವಗಡ: ಭೀಮಾ ನದಿಯ ತೀರದ ಯಾದಗಿರಿ, ಶಹಪುರ ಮತ್ತು ಕಲಬುರ್ಗಿ ಭಾಗಗಳಲ್ಲಿ ನೆರೆ ಪೀಡಿತರ ಸಹಾಯಕ್ಕಾಗಿ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಇನ್ಫೋಸಿಸ್ ಸಂಸ್ಥೆಯ ಸಹಯೋಗದಲ್ಲಿ 2,000 ಪರಿಹಾರ ಕಿಟ್ ಗಳನ್ನು ತಯಾರಿಸುತ್ತಿದೆ.
ಪಟ್ಟಣದಲ್ಲಿ ತುಮಕೂರು ವಿವಿಯ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಆಶ್ರಮದ ಭಕ್ತರು ಕೈಜೋಡಿಸಿ ಕಿಟ್ ಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಪ್ರತೀ ಬಾರಿ ಪ್ರವಾಹ ಉಂಟಾದಾಗ ಮಾನವೀಯ ಸಹಾಯದ ಹಸ್ತ ಚಾಚುವ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಈ ಬಾರಿ ಕೂಡ ಉತ್ತರ ಕರ್ನಾಟಕದ ನೆರೆ ಬಾಧಿತರಿಗೆ ಪರಿಹಾರ ವಿತರಿಸಲು ಸಜ್ಜಾಗಿದೆ.
ಸ್ವಾಮೀಜಿ ಅವರು, “ಬಾಧಿತರ ನೋವನ್ನು ತಣಿಸಲು ನಮ್ಮ ಆಶ್ರಮ ಸದಾ ಮುಂದಿರುತ್ತದೆ. ಈ ಬಾರಿ ಸಹ ತಂಡವು ತಕ್ಷಣದ ನೆರವಿಗಾಗಿ ಸಜ್ಜಾಗಿದೆ,” ಎಂದು ಮಾಹಿತಿ ನೀಡಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC