ಉತ್ತರ ತಮಿಳುನಾಡು ಹಾಗೂ ದಕ್ಷಿಣ ಆಂಧ್ರಕ್ಕೆ ಮೈಚಾಂಗ್ ಚಂಡಮಾರುತ ಭೀತಿ ಎದುರಾಗಿದ್ದು, ಚಂಡಮಾರುತ ಇಂದು ಪೂರ್ವ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ.
ಈ ಚಂಡಮಾರುತದ ಪರಿಣಾಮ ರಾಜ್ಯದ ಮೇಲೂ ಆಗಲಿದ್ದು, ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಅಲ್ಲದೇ ದಾವಣಗೆರೆ, ರಾಮನಗರ, ಹಾಸನ, ಕೊಡಗು, ವಿಜಯನಗರ, ಶಿವಮೊಗ್ಗ, ಬಳ್ಳಾರಿ, ಕಲಬುರ್ಗಿ, ರಾಯಚೂರು, ಬೀದರ್ ವಿಜಯಪುರದಲ್ಲೂ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಶಾಲಾ ಕಾಲೇಜುಗಳಿಗೆ ಎಲ್ಲೂ ರಜೆಯಿಲ್ಲಎಂದು ಸ್ಪಷ್ಟನೆ ನೀಡಲಾಗಿದೆ.