ಪುಣೆ: ಗಂಡ ಕಾರಿಗಾಗಿ ಲೋನ್ ಮಾಡಿದ್ದು, ಇಎಂಐ ಇನ್ಸ್ಟಾಲ್ ಮೆಂಟ್ ತುಂಬುವುದಕ್ಕಾಗಿ ಹೆಂಡ್ತಿಗೆ ತನ್ನ ತವರಿನಿಂದ ಒಂದೂವರೆ ಲಕ್ಷ ರೂಪಾಯಿ ಕೇಳಿಕೊಂಡು ಬರುವಂತೆ ಕಿರುಕುಳ ನೀಡಿದ್ದಾನೆ. ಆದರೆ, ಹಣ ತರುವ ಸ್ಥಿತಿಯಲ್ಲಿಆಕೆ ಇರಲಿಲ್ಲ. ಇದರಿಂದ ಕೋಪಗೊಂಡ ಗಂಡ ಹೀನ ಕೆಲಸಕ್ಕೆ ಕೈ ಹಾಕಿದ್ದಾನೆ.
ತನ್ನ ಬೇಡಿಕೆಗೆ ಬಗ್ಗದ ಪತ್ನಿಗೆ ಬುದ್ಧಿ ಕಲಿಸಲು ಪತಿ ಸ್ನಾನ ಗೃಹದಲ್ಲಿ ಕ್ಯಾಮರಾ ಫಿಕ್ಸ್ ಮಾಡಿ ಆಕೆ ಸ್ನಾನ ಮಾಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ.
ಪುಣೆಯ ಅಂಬೇಗಾಂವ್ ನಲ್ಲಿ ಈ ಘಟನೆ ನಡೆದಿದ್ದು, 4 ವರ್ಷಗಳ ಹಿಂದೆಯಷ್ಟೇ ಈ ಮಹಿಳೆ ಆರೋಪಿ ಜೊತೆಗೆ ವಿವಾಹವಾಗಿದ್ದಳು. ಸದ್ಯ ಯುವತಿ ತನ್ನ ಗಂಡ ಸೇರಿದಂತೆ 6 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC