ತುಮಕೂರು: ಪತ್ನಿಯು ಪರ ಪುರುಷನೊಂದಿಗೆ ಓಡಿ ಹೋದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ಗಂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತುಮಕೂರು ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟಿರುವ ದೇವರಾಜ್, ಹೆಂಡತಿಯನ್ನ ಓಡಿಸಿಕೊಂಡು ಹೋದ ಪುರುಷನಿಂದ ಗಂಡನಿಗೆ ಧಮ್ಕಿ ಹಾಕಿದ್ದನು. ತನಗೆ ಆನಂದ್ ಜೀವ ಬೆದರಿಕೆ ಹಾಕಿದ್ದ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾನೆ. ಹೆಂಡತಿಯನ್ನ ಓಡಿಸಿಕೊಂಡು ಹೋದ ಆನಂದ್ ಮತ್ತು ಹೆಂಡತಿಯ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ, ಕುಮಾರಸ್ವಾಮಿ, ಮೋದಿ ಸೇರಿದಂತೆ ಹಲವರಿಗೆ ಡೆತ್ ನೋಟ್ ಬರೆದು, ಆನಂದ್ ಮತ್ತು ಪತ್ನಿ ಮಾದವಿ ಇಬ್ಬರಿಗೂ ಶಿಕ್ಷೆ ಕೊಡಿಸುವಂತೆ ಡೆತ್ ನೋಟ್ ಬರೆದಿದ್ದಾನೆ.
ಹೀಗಾಗಿ ದೇವರಾಜ್ ಮನನೊಂದು ನ್ಯಾಯಕ್ಕಾಗಿ ಡೆತ್ ನೋಟ್ ಬರೆದಿದ್ದು ಅದ್ರಲ್ಲಿ ನನಗೆ ನ್ಯಾಯ ಕೊಡಿಸುವಂತೆ ಪ್ರಧಾನಿ ಮೋದಿ, ಕುಮಾರಸ್ವಾಮಿ, ಡಿಸಿ–ಎಸ್ಪಿಗೆ ಮನವಿ ಮಾಡಿದ್ದಾನೆ.
ದೇವರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾನೆ. ಪ್ರೀತಿಸಿ ಮದುವೆಯಾಗಿ 18 ವರ್ಷದ ಬಳಿಕ ಮತ್ತೊಬ್ಬನ ಜೊತೆಗೆ ಸಖ್ಯ ಹೊಂದಿದ್ದ ಪತ್ನಿಯ ವಿಷಯ ತಿಳಿದು ಹಲವು ಬಾರಿ ದೇವರಾಜ್ ಮನನೊಂದಿದ್ದನು. ಪ್ರೀತಿಸಿ ಮದುವೆಯಾದ್ರೂ ಕಮ್ಮಿಯಾಗದ ಪರ ಪುರುಷನ ಮೇಲೆ ಪತ್ನಿಯ ವ್ಯಾಮೋಹ ಹೆಚ್ಚುತ್ತಲೇ ಹೋಗಿತ್ತು. ಒಂದು ಹಂತದಲ್ಲಿ ಗಂಡ, ಮಕ್ಕಳನ್ನ ಬಿಟ್ಟು ಪರಪುರುಷನೊಂದಿಗೆ ಪರಾರಿಯಾದ ಪತ್ನಿಯು ನಡತೆಯಿಂದ ದೇವರಾಜ್ ತೀವ್ರ ನೊಂದಿದ್ದನು.
ಪತ್ನಿಯಾದ ಮಾಧವಿ, ಹೊಸಹಳ್ಳಿ ಗ್ರಾಮದ ಆನಂದ್ ಕುಮಾರ್ ಎಂಬ ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ. ಇದ್ರಿಂದ ಇಬ್ಬರು ಹೆಣ್ಣುಮಕ್ಕಳು ತಬ್ಬಲಿಗಳಾಗಿದ್ದಾರೆ.
ಮಾಧವಿಯನ್ನು 17 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದೇವರಾಜ್, ಹೊಸಹಳ್ಳಿಯಲ್ಲಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದನು. ದಂಪತಿಗೆ 16 ಹಾಗೂ 12 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪ್ರತಿ ನಿತ್ಯ ಅಂಗಡಿಯ ಬಳಿ ಬರುತ್ತಿದ್ದ ಆನಂದ್ ಕುಮಾರ್, ಈ ವೇಳೆ ಮಾಧವಿಯೊಂದಿಗೆ ಸಲುಗೆ ಬೆಳೆಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದನು. ಮೂರು ತಿಂಗಳ ಹಿಂದೆ ಗಂಡ ಮನೆ, ಮಕ್ಕಳನ್ನು ಬಿಟ್ಟು ಓಡಿ ಹೋಗಿರೋ ಮಾಧವಿ ವಾಪಸ್ ಮನೆಗೆ ಬಂದಿರಲಿಲ್ಲ.
ಹೆಂಡತಿ ಓಡಿ ಹೋಗಿದ್ದಕ್ಕೆ ಮನನೊಂದು ವಿಷ ಸೇವಿಸಿದ ದೇವರಾಜ್, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಮಾಧವಿ, ಆನಂದ್ ವಿರುದ್ದ ಪ್ರಕರಣ ದಾಖಲು ಆತ್ಮಹತ್ಯೆಗೆ ಪ್ರಚೋದನೆ ಆರೋಪ ಮೇಲೆ ದೂರು ದಾಖಲಾಗಿದೆ. ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಮಾಧವಿ, ಆನಂದ್ ತಲೆಮರೆಸಿಕೊಂಡಿದ್ದಾರೆ. ಇಬ್ಬರನ್ನೂ ಬಂಧಿಸುವಂತೆ ದೇವರಾಜ್ ಸಂಬಂಧಿಕರ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA