ಹಿಂದಿನ ಸರ್ಕಾರದ ಆರೋಪ ಬಗ್ಗೆಯೂ ತನಿಖೆ ಮಾಡಿಸುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 2013ರಿಂದಲೂ ತನಿಖೆ ಮಾಡಿಸಿ ಎಂದು ಬೊಮ್ಮಾಯಿ ಹೇಳಿದ್ದಾರೆ. ನೀವು ಅಧಿಕಾರದಲ್ಲಿ ಇದ್ದಾಗ ತನಿಖೆ ಮಾಡಿಸಬಹುದಿತ್ತಲ್ಲಾ? ನಾವೇನು ಅಡ್ಡ ಬರುತ್ತಾ ಇರಲಿಲ್ಲ, ನೀವು ಯಾಕೆ ತನಿಖೆ ಮಾಡಿಸಲಿಲ್ಲ? ನೀವು ಅಧಿಕಾರಲ್ಲಿದ್ದಾಗ ತನಿಖೆ ಮಾಡಿಸಲಿಲ್ಲ ಅಂದರೆ, ನಮ್ಮ ವಿರುದ್ಧ ಯಾವುದೇ ದಾಖಲಾತಿಗಳೂ ಇರಲಿಲ್ಲ ಎಂದರ್ಥ ಎಂದರು.
1983ರಲ್ಲಿ ನಾನು ಶಾಸಕನಾದೆ, 1984ರಲ್ಲಿ ನಾನು ಮಂತ್ರಿ ಆದೆ. ಆಮೇಲೆ ಡಿಸಿಎಂ, ವಿರೋಧ ಪಕ್ಷದ ನಾಯಕ, ಸಿಎಂ ಆಗಿದ್ದೇನೆ. ಇದೇ ಮೊದಲಲ್ಲ ಸಿಎಂ ಆಗಿರುವುದು, 2ನೇ ಬಾರಿ ಸಿಎಂ ಆಗಿದ್ದೇನೆ. ದೇವರಾಜ ಅರಸು ಬಿಟ್ಟರೆ ಪೂರ್ಣಾವಧಿ ಸಿಕ್ಕಿರುವುದು ನನಗೇನೆ. ಸುದೀರ್ಘ ರಾಜಕಾರಣದಲ್ಲಿ ಕಳಂಕವೂ ಇಲ್ಲ, ಹಗರಣವೂ ಇಲ್ಲ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


