ತುರುವೇಕೆರೆ: ಕಾಂಗ್ರೆಸ್ ಅಭ್ಯರ್ಥಿ ಬಿ.ಎಂ.ಎಲ್.ಕಾಂತರಾಜ್ ರವರ ಕಚೇರಿಯಲ್ಲಿ ತಾಲ್ಲೂಕಿನ ಮಣಿಚಂಡೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ನೂರಾರು ಯುವಕರು ಬೆಮೆಲ್ ಕಾಂತರಾಜುರವರ ನಾಯಕತ್ವ ಆದರ್ಶಗಳನ್ನು ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಹಾಗೂ ವಕೀಲ ನಟರಾಜ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡರು.
ನಂತರ ಮಾತನಾಡಿದ ಬೆಮೆಲ್ ಕಾಂತರಾಜು ನಮ್ಮ ಪಕ್ಷಕ್ಕೆ ಬಂದಿರುವ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುವುದಾಗಿ ತಿಳಿಸಿ ಎಲ್ಲರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತೇವೆ. ನಮ್ಮ ಸರ್ಕಾರ ಬರಲೆಂದು ನೀವು ನಮ್ಮ ಜೊತೆ ಕೈಜೋಡಿಸಿದ್ದೀರಿ , ಅದಕ್ಕೆ ನನ್ನ ಕೃತಜ್ಞತೆ ತಿಳಿಸುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರೆಂದು ನಂಬಿದ್ದೇನೆ ಎಂದರು.
ಇಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ನನಗೆ ವಿಶ್ವಾಸವಿದೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಸಹ ನನ್ನನ್ನು ಯಾವುದೇ ಸಂಕೋಚವಿಲ್ಲದೆ ಸಂಪರ್ಕಿಸಿ ಎಂದ ಅವರು, ಸೋಮವಾರ ನಾಮಪತ್ರ ಸಲ್ಲಿಸಲಿದ್ದೇನೆ, ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರುಗಳನ್ನು ಜನಗಳನ್ನು ಸೇರಿಸಿ ನಾಮಪತ್ರ ಸಲ್ಲಿಸುವ ಕಾರ್ಯವನ್ನು ನಾನು ಮಾಡುವುದಿಲ್ಲ, ಮುಂದಿನ ದಿನಗಳಲ್ಲಿ ತುರುವೇಕೆರೆಗೆ ರಾಹುಲ್ ಗಾಂಧಿ ವರು ಬರುವ ನಿರೀಕ್ಷೆಯಿದ್ದು, ಆ ವೇಳೆಗೆ ರೋಡ್ ಶೋ ನಡೆಸಲಿದ್ದು, ಅದಕ್ಕೆ ನಾವು ತಯಾರಿ ನಡೆಸಿದ್ದೇವೆ ಎಂದರು.
ಚುನಾವಣಾ ಆಯೋಗ ವಿಧಿಸಿರುವ ಮಾನದಂಡದಂತೆ ನಾವು ನಾಮ ಪತ್ರವನ್ನು 20ನೇ ತಾರೀಖಿನಂದು ಡಿಕೆಶಿ ರವರು ಬರಲಿದ್ದು, ರೋಡ್ ಶೋ ನಡೆಸಿ ಸಲ್ಲಿಸಲಿದ್ದೇವೆ. ರಾಹುಲ್ ಗಾಂಧಿಯವರು, 22 ರಿಂದ 26ನೇ ತಾರೀಕಿನ ಒಳಗೆ ಆಗಮಿಸಿ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಪ್ರತೀ ಜಿಲ್ಲೆಯಲ್ಲಿ 4 ತಾಲ್ಲೂಕುಗಳನ್ನೂ ಆಯ್ಕೆ ಮಾಡಿಕೊಂಡು ಆಗಮಿಸುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ಆಗಮಿಸಲಿದ್ದಾರೆ. ಶಕ್ತಿ ಪ್ರದರ್ಶನ ಮಾಡುವ ಇರಾದೆ ನಮಗಿಲ್ಲ, ನಾವು ಗೆದ್ದೇ ಗೆಲ್ಲುತ್ತೇವೆ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಎಚ್.ಕೆ.ನಾಗೇಶ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್, ದಲಿತ ಮುಖಂಡ ಗುರುದತ್, ಅಜ್ಜನಹಳ್ಳಿ ಜವರೇಗೌಡ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ನಂಜುಂಡಪ್ಪನವರು ಹಾಗೂ ಮುಖಂಡರುಗಳಾದ ಜಿ ಎಂ ಲಕ್ಷ್ಮೀಕಾಂತ್ , ಕೊಳಾಲ ನಾಗರಾಜ್, ಶಿವರಾಜು, ಕೆಂಪರಾಜು, ಲಕ್ಷ್ಮೀದೇವಮ್ಮ, ಸುನಿಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy