ತುಮಕೂರು: ನಾನು ತುಮಕೂರು ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕಿಯಾಗಿ ಜೂ. 9 ಕ್ಕೆ ಒಂದು ವರ್ಷ ಪೂರೈಸಲಿದ್ದು, ಈ ಅವಧಿಯಲ್ಲಿ ಪಾರದರ್ಶಕ ಆಡಳಿತ ಮಾಡಿದ ತೃಪ್ತಿ, ಆತ್ಮವಿಶ್ವಾಸ ನನಗಿದೆ ಎಂದು ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ಸಂತಸ ವ್ಯಕ್ತಪಡಿಸಿದ್ದರು.
ಗುಬ್ಬಿ ಪಟ್ಟಣದ ಕ್ಷೀರ ಭವನದಲ್ಲಿ ಇಂದು ಆಯೋಜನೆ ಮಾಡಲಾಗಿದ್ದ ತುಮುಲ್ ನಿರ್ದೇಶಕಿ ಭಾರತೀ ಶ್ರೀನಿವಾಸ್ ಹುಟ್ಟು ಹಬ್ಬ ಆಚರಣೆ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯ ರಿಗೆ ಹಸು ಎತ್ತುವ ಯಂತ್ರ. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಹಕಾರ ಕ್ಷೇತ್ರ ನನಗೆ ಸಂಪೂರ್ಣ ಹೊಸದಾಗಿದ್ದು ಈ ಕ್ಷೇತ್ರದಲ್ಲಿ ಕಲಿಯುವುದು ಸಾಕಷ್ಟಿತ್ತು. ಅಧಿಕಾರ ವಹಿಸಿಕೊಂಡ ನಂತರ ತಾಲೂಕಿನ ಸುಮಾರು 70 ಕ್ಕೂ ಹೆಚ್ಚು ಹಾಲಿನ ಕೇಂದ್ರಕ್ಕೆ ಭೇಟಿ ನೀಡಿ ಹಾಲಿನ ಕೇಂದ್ರ ಗಳ ಕುಂದು ಕೊರತೆ, ಸಾಮಾನ್ಯ ಸಮಸ್ಯೆ ಗಳನ್ನು ಅರಿತು ಒಕ್ಕೂಟದ ಸಭೆಯಲ್ಲಿ ಭಾಗವಹಿಸಿ ನನ್ನ ತಾಲೂಕಿಗೆ ಬೇಕಿರುವ ಸೌಲಭ್ಯಗಳನ್ನು ಹೋರಾಟ ಮಾಡುವ ಮೂಲಕ ರೈತರಿಗೆ ತಲುಪಿಸುವಲ್ಲಿ ಸಫಲರಾಗಿದ್ದೇನೆ ಎಂದರು.
ತಾಲೂಕಿನ ಲ್ಲಿ ಹೊಸದಾಗಿ ಉಪ ಕೇಂದ್ರಗಳು ಸೇರಿ 17 ಹೊಸ ಹಾಲಿನ ಡೈರಿಗಳನ್ನು ಮಾಡಲಾಗಿದ್ದು ಅದರಲ್ಲಿ ಮೂಡಲಪಾಳ್ಯದ ನೂತನ ಹಾಲಿನ ಡೈರಿ ಬಹಳ ಅಚ್ಚು ಮೆಚ್ಚು ಎಂದರು. ಸಂಘದ ಸದಸ್ಯರಿಗೆ ಹಸುಗಳಿಗೆ ಆರೋಗ್ಯ ಸಮಸ್ಯೆ ಬಂದರೆ ಹಸುಗಳನ್ನು ಲಿಫ್ಟ್ ಮಾಡಲು ಅನುಕೂಲ ವಾಗುವ ದೃಷ್ಟಿ ಯಿಂದ ದಾನಿಗಳ ನೆರವು ಪಡೆದು ತಾಲೂಕಿನ 15 ಸಂಘಗಳಿಗೆ ಲಿಫ್ಟ್ ಮಿಷನ್ ನೀಡಲಾಗುತ್ತಿದೆ. ಒಕ್ಕೂಟದ ವತಿಯಿಂದ ಸಂಘದ ಸದಸ್ಯರ 35 ಮಕ್ಕಳಿಗೆ ವಿದ್ಯಾರ್ಥಿ ವೇತನ. ಪಡ್ಡೆರಾಸು ಮರಣ ವಿಮೆಹಣದ ಚೆಕ್ ವಿತರಣೆ ಮಾಡಲಾಗಿದ್ದು ಹಾಲು ಉತ್ಪಾದರ ಸಂಘದ ಅಭಿವೃದ್ಧಿ ಗೆ ಹೆಚ್ಚಿನ ಪ್ರಮುಖ್ಯತೆ ನೀಡಲು ನಾನು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ್, ರಥ ವೈಭವ ಚಿತ್ರದ ನಾಯಕ ನಟ ದುಷ್ಯಂತ್ ಶ್ರೀನಿವಾಸ್, ಅಧಿಕಾರಿಗಳಾದ ಶಂಕರ್ ನಾಗ್, ರಾಜು ಮೋಹನ್, ಕಾಂಗ್ರೆಸ್ ಮುಖಂಡರಾದ ಬಿದರೆ ಯತೀಶ್, ವಾಸುಗೌಡ, ಇತರ ಮುಖಂಡರು, ಗುಬ್ಬಿ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು, ಅಧಿಕಾರಿ ವರ್ಗದವರು ಹಾಜರಿದ್ದರು.
ವರದಿ: ಚೇತನ್ ಗೌಡ, ಗುಬ್ಬಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


