ಕಥೆ, ಪಾತ್ರಕ್ಕೆ ಬೇಕಾದರೆ ಗ್ಲಾಮರ್ ಸೀನ್, ಕಿಸ್ ಸೀನ್ ಗಳಲ್ಲಿ ನಟಿಸಲು ಸಿದ್ಧ ಎನ್ನುತ್ತಾರೆ ಬಹುತೇಕ ನಾಯಕಿಯರು. ಆದರೆ ಅಂತಹ ದೃಶ್ಯಗಳಿಗೆ ನೋ ಹೇಳುವ ನಾಯಕಿಯರು ಕೆಲವೇ ಕೆಲವು ಮಂದಿ. ನಾಯಕಿ ಮೃಣಾಲ್ ಠಾಕೂರ್ ಕೂಡ ಗ್ಲಾಮರ್ ದೃಶ್ಯಗಳು ಮತ್ತು ಚುಂಬನದ ದೃಶ್ಯಗಳಲ್ಲಿ ನಟಿಸಲು ನಾನು ಒಪ್ಪುವುದಿಲ್ಲ ಎಂದಿದ್ದಾರೆ.
ಮರಾಠಿ ಚೆಲುವೆ ‘ಸೀತಾ ರಾಮ್’ (2022) ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು. ಮೃಣಾಲ್ ತನ್ನ ಮೊದಲ ಚಿತ್ರದಲ್ಲೇ ತನ್ನ ಸೌಂದರ್ಯ ಮತ್ತು ನಟನೆಯಿಂದ ಸೂಪರ್ ಹಿಟ್ ಹೀರೋಯಿನ್ ಎಂಬ ಖ್ಯಾತಿಯನ್ನು ಪಡೆದರು. ಅದಾದ ನಂತರ ತೆಲುಗಿನ ನಾನಿ ಜೊತೆ ‘ಹಾಯ್ ನನ್ನ’ ಮತ್ತು ವಿಜಯ್ ದೇವರಕೊಂಡ ಜೊತೆ ‘ಫ್ಯಾಮಿಲಿ ಸ್ಟಾರ್ ಸಿನಿಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಲ್ಲಿ ತಮ್ಮದೇ ಆದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಮೃಣಾಲ್ ಠಾಕೂರ್ ”ನಾನು ತೀವ್ರವಾದ ಚುಂಬನದ ದೃಶ್ಯಗಳು ಮತ್ತು ಮಲಗುವ ಕೋಣೆ ದೃಶ್ಯಗಳಲ್ಲಿ ನಟಿಸಲು ಇಷ್ಟಪಡುವುದಿಲ್ಲ. ಮೇಲಾಗಿ ನನ್ನ ತಂದೆ-ತಾಯಿಗೆ ಕೂಡ ನಾನು ಇಂತಹ ದೃಶ್ಯಗಳಲ್ಲಿ ನಟಿಸುವುದು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA