ಗುಬ್ಬಿ: ಸಿಎಂ ಬದಲಾವಣೆ ಮಾಡೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ ಆದರೆ ಸಿಎಂ ಬದಲಾವಣೆ ವಿಚಾರ ನನಗಂತೂ ಗೊತ್ತಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಬಿದರೆ, ಕಾಶಿ ಮಠ ನಿಂಬೆ ಕಟ್ಟೆ ಹಾಗೂ ಮಾರನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪಕ್ಷದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಹುಸೇನ್ ಇಕ್ಬಾಲ್ ಹಾಗೂ ಯತೀಂದ್ರ ಅವರ ವೈಯಕ್ತಿಕವಾಗಿ ಹೇಳಿದಾರೆ. ಆದರೆ ಯಾರು ಏನೇ ಹೇಳಿದರೂ ಸಿಎಂ ಬದಲಾವಣೆ ಮಾಡೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ, ಆದರೆ ಅವರ ಹೇಳಿಕೆಗಳನ್ನು ಅವರು ಹೇಳಿಕೊಂಡಿದ್ದಾರೆ ಎಂದು ಯತೀಂದ್ರ ಹಾಗೂ ಹುಸೇನ್ ಇಕ್ಬಾಲ್ ಅವರನ್ನು ಸಮರ್ಥಿಸಿಕೊಂಡರು.
ಅಧಿವೇಶನದಲ್ಲಿ ಶಿವಲಿಂಗೇಗೌಡರು ಹಿರಿಯ ರಾಜಕಾರಣಿ, ಆದರೆ ಒಂದು ವರ್ಷದಿಂದಲೂ ಶಿವಲಿಂಗೇಗೌಡರ ಬಗ್ಗೆ ಅಧಿವೇಶದಲ್ಲಿ ಕೊಬ್ಬರಿ ಕಳ್ಳ ಅಂತ ಹೇಳಿದ್ದರು. ಮಂಗಳೂರು ಕಡೆಯವರು ಮೂರು ನಾಲ್ಕು ಜನ ಶಾಸಕರು ಹೊಸದಾಗಿ ಗೆದ್ದಿದ್ದಾರೆ ಅವರು ಶಿವಲಿಂಗೇಗೌಡರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ . ಅದಕ್ಕೆ ಶಿವಗಂಗೆ ಗೌಡ್ರು ಸಿಟ್ಟಾಗಿ ಅವರನ್ನು ಬೈದಿದ್ದಾರೆ, ಆದರೆ ಅಧಿವೇಶನದಲ್ಲಿ ಇವೆಲ್ಲ ಮಾತಾಡ್ಬಾರ್ದು, ಒಬ್ಬ ವ್ಯಕ್ತಿ ಬಗ್ಗೆ ಮಾತನಾಡೋದು ತಪ್ಪು, ಯಾರೇ ಆಗಿರಲಿ ಅಧಿವೇಶನದಲ್ಲಿ ಇವೆಲ್ಲ ಮಾತನಾಡಬಾರದು ಎಂದರು.
ಇನ್ನೂ ಗುಬ್ಬಿ ತಾಲೂಕಿನಲ್ಲಿ ಈಗಾಗಲೇ ಸಿಸಿಟಿವಿಗಳನ್ನು ಕೂಡ ಅಳವಡಿಸಿದ ಬಗ್ಗೆ ಚರ್ಚೆ ಮಾಡಿದ್ದೇವೆ. ಸುಮಾರು 280 ಸಿಸಿಟಿವಿಗಳನ್ನ ಗುಬ್ಬಿ ತಾಲೂಕಿನ ಒಳಗಡೆ ಮತ್ತು ಹೊರಗಡೆ ತಾಲೂಕಿನ ಯಾವುದೇ ಮೂಲೆಯಿಂದ ಬಂದರೂ ಕೂಡ ಸಿಸಿಟಿವಿಯಲ್ಲಿ ಕಾಣಬೇಕು ಆ ರೀತಿಯಲ್ಲಿ 280 ಸಿಸಿಟಿವಿಗಳನ್ನು ಈಗಾಗಲೇ ತಗೊಂಡಿದೀವಿ ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲಾ ಕಡೆ ಆಳವಿಡಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಯತೀಶ್, ಕೋಟಿ ನಿಂಗಪ್ಪ, ಪಿಡಿಓಗಳಾದ ಯುವರಾಜು, ಅಶೋಕ್ ಬಸವನಾಳು, ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದರಾಜು, ಸಾತೇನಹಳ್ಳಿ ರಾಜಣ್ಣ, ವತ್ಸಲ, ಮೈಲಾರಯ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಚೇತನ್ ಗೌಡ, ಗುಬ್ಬಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


