ನಿನ್ನೆಯಷ್ಟೆ ಕೆಪಿಸಿಸಿ 32 ಶಾಸಕರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶಿಸಿದ್ದು ಕೆಎಸ್ ಆರ್ ಟಿಸಿ ನಿಗಮದ ಅಧ್ಯಕ್ಷರಾಗಿ ತಮ್ಮನ್ನು ನೇಮಕ ಮಾಡಿರುವ ಕುರಿತು ಶಾಸಕ ಎಸ್.ಆರ್. ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಎಸ್.ಆರ್. ಶ್ರೀನಿವಾಸ್, ಸಿಎಂ, ಡಿಸಿಎಂ ನಂಬಿಕೆ ಇಟ್ಟು ನನ್ನ ನೇಮಕ ಮಾಡಿದ್ದಾರೆ. ನನಗೆ ಯಾವುದೇ ಅಸಮಾಧಾನವಿಲ್ಲ ನಾನು ಯಾವುದೇ ಸ್ಥಾನಮಾನ ಕೇಳಿರಲಿಲ್ಲ. ಇದರಲ್ಲಿ ಅಸಮಾಧಾನ ಪ್ರಶ್ನೆಯೇ ಉದ್ಭವಿಸಲ್ಲ. ಯಾವುದು ಕೊಟ್ಟಿದ್ದಾರೆ ಎಂದು ನಾನು ಚಿಂತಿಸುವುದಿಲ್ಲ ಎಂದು ತಿಳಿಸಿದ್ದಾರೆ.


