ಗುಬ್ಬಿ: ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಲಿಂಕ್ ಕಾಮಗಾರಿಗೆ ಮೊದಲಿಂದಲೂ ನಾನು ವಿರೋಧವನ್ನು ಮಾಡುತ್ತಿದ್ದೇನೆ, ಆದರೆ ಆಡಳಿತ ಪಕ್ಷ ಇರುವುದರಿಂದ ನಾನು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ, ನನಗೆ ನನ್ನ ತಾಲೂಕಿನ ಜನ ಮುಖ್ಯ, ಹೇಮಾವತಿ ನೀರಿನ ವಿಚಾರದಲ್ಲಿ ನನಗೆ ವಿರೋಧವಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಮಲಾಮಚಕುಂಟಿ, ಸಣಬನಹಳ್ಳಿ, ಈರಪ್ಪನ ಹಟ್ಟಿ ಹಾಗೂ ಹೂವಿನಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸುಮಾರು 4 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕುಣಿಗಲ್ ಉತ್ಸವಕ್ಕೆ ನನ್ನನ್ನು ಆಹ್ವಾನ ಮಾಡಿದರು. ನಾನು ಕೂಡ ಹೋಗಿದ್ದೆ ಆದರೆ ಉಪಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಹೇಮಾವತಿ ವಿಚಾರದ ಬಗ್ಗೆ ಮಾತನಾಡಿರುವುದು ನಿಜ. ಆದರೆ ನಾನು ಸಂಪೂರ್ಣ ಬೆಂಬಲ ಕೊಡ್ತೀನಿ ಅಂತ ಎಲ್ಲೋ ಹೇಳಿಲ್ಲ ಹೇಳುವುದು ಇಲ್ಲ. ಡಿ.ಕೆ.ಶಿವಕುಮಾರ್ ಅವರು ಈ ವಿಚಾರ ಯಾಕೆ ಹೇಳಿದರು ನನಗಂತೂ ಗೊತ್ತಿಲ್ಲ ಆದರೆ ನನ್ನ ತಾಲೂಕಿನ ರೈತರ ಹಿತ ಕಾಪಾಡುವ ಉದ್ದೇಶದಿಂದ ನಾನು ಕೂಡ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧವನ್ನು ಮಾಡೇ ಮಾಡುತ್ತೀನಿ ಎಂದರು.
ಚುನಾವಣೆ ಹತ್ತಿರ ಬರ್ತಾ ಇದೆಯಲ್ಲ ಅದಕ್ಕೆ ದಿಲೀಪ್ ಕುಮಾರ್ ಅವರು ನನ್ನ ಮೇಲೆ ಇಲ್ಲದ ಸಲ್ಲದ ಆರೋಪವನ್ನು ಮಾಡ್ತಾ ಇದ್ದಾರೆ. ನಾನು ಈ ತಾಲೂಕಿನಲ್ಲಿ ಗೆದ್ದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡಿದ್ದೇನೆ, ನಾನು ಇದುವರೆಗೂ ಯಾವ ರೈತನ ಮೇಲೂ ಕೂಡ ಒಂದು ಕೇಸ್ ಹಾಕಿಸಿಲ್ಲ ಹಾಕಿಸಿದ್ರೆ ತೋರಿಸಲಿ ಅದನ್ನ ಬಿಟ್ಟು ಸುಳ್ಳು ಹೇಳಿಕೊಂಡು ಹೇಳಿಕೆ ಕೊಡುವುದನ್ನು ದಿಲೀಪ್ ಕುಮಾರ್ ಅವರು ಬಿಡಬೇಕು. ಈಗಾಗಲೇ ಎರಡು ಸಲಿ ಚುನಾವಣೆಯಲ್ಲಿ ನಿಂತು ಸೋತಿದ್ದಾರೆ. ಅವರಿಗೆ ಬೇರೆ ಏನು ಕೆಲಸ ಇಲ್ಲ ಸುಖ ಸುಮ್ಮನೆ ಹೇಮಾವತಿ ವಿಚಾರದಲ್ಲಿ ಬಿಟ್ರೆ ಬೇರೆ ಯಾವುದೇ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಲ್ಲ ಎಂದರು.
ನಾನು ಯಾವತ್ತು ಅಧಿಕಾರಕ್ಕೋಸ್ಕರ ಆಸೆ ಪಡುವನಲ್ಲ ನಾನು ಯಾರನ್ನು ಕೂಡ ನನ್ನನ್ನ ಮಂತ್ರಿ ಮಾಡಿ ಅಂತ ಕೇಳಿಲ್ಲ ನನಗೆ ನನ್ನ ಕ್ಷೇತ್ರದ ಜನ ಮುಖ್ಯ ಜನ ಇವತ್ತು ಮತ ಹಾಕಿ ಗೆಲ್ಲಿಸಿದ್ದಾರೆ. ಅವರ ಕೆಲಸ ಮಾಡೋದು ನನ್ನ ಜವಾಬ್ದಾರಿ ಎಂದ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ. ಆದರೆ ನಾನು ಯಾರಹತ್ರನು ಹೋಗಿ ನನ್ನನ್ನ ಮಂತ್ರಿ ಮಾಡು ಅಂತ ಇದುವರೆಗೂ ನನ್ನ ಲೈಫಲ್ಲಿ ಕೇಳಿಲ್ಲ, ಸುಖ ಸುಮ್ಮನೆ ನನ್ನ ವಿರುದ್ಧ ಇಲ್ಲದ ಸಲ್ಲದ ಆರೋಪ ಮಾಡುವವರು ತುಂಬಾ ಜನ ಇದ್ದಾರೆ ಅವರ ಬಗ್ಗೆ ನಾನು ತಲೆನೇ ಕೆಡಿಸಿಕೊಳ್ಳಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಇದೇ ಸಂದರ್ಭದಲ್ಲಿ ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಣುಕಯ್ಯ, ಜಯಮ್ಮ ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಮಣ್ಣ ದಯಾನಂದ್, ಐಯಾಣ್ಣ, ಸುನೀತಾ ಗಿರೀಶ್ , ಸಿದ್ದರಾಮಯ್ಯ , ಸಾತೇನಹಳ್ಳಿ ರಾಜಣ್ಣ ವತ್ಸಲ ಪಿಡಿಓ ರಾಜೇಂದ್ರ ಪ್ರಸಾದ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಚೇತನ್ ಗೌಡ, ಗುಬ್ಬಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


