ನವದೆಹಲಿ: ಕಿರುತೆರೆಯ ಜನಪ್ರಿಯ ಧಾರಾವಾಹಿ ನಟಿ ಕೃಷ್ಣ ಮುಖರ್ಜಿ ಅವರಿಗೆ ಮೇಕಪ್ ರೂಂನಲ್ಲಿ ನಿರ್ಮಾಪಕರು ಕಿರುಕುಳ ನೀಡಿದ್ದಾರೆ ಎಂದು ನೋವನ್ನು ಹಂಚಿಕೊಂಡಿರುವ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ನಾಗಿನ್ 3, ಕುಚ್ ತೋ ಹೈ, ನಾಗಿನ್ ಏಕ್ ನಯಾ ರಂಗ್ ಮೇ, ಶುಭ್ ಸೌಗನ್ ಮುಂತಾದ ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳು ಕೃಷ್ಣ ಮುಖರ್ಜಿಯವರು ಜನಪ್ರಿಯತೆ ಗಳಿಸಿದರು.
ಇವರು ಇತ್ತೀಚೆಗೆ ಕಾರ್ಯಕ್ರಮದ ನಿರ್ಮಾಪಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ನನ್ನ ಕೊನೆಯ ಕಾರ್ಯಕ್ರಮ “ಶುಭ್ ಶಗುನ್” ಮಾಡಲು ಪ್ರಾರಂಭಿಸಿದಾಗ ನನ್ನ ಕೆಟ್ಟ ಸಮಯ ಪ್ರಾರಂಭವಾಯಿತು. ಅದು ನನ್ನ ಜೀವನದ ಅತ್ಯಂತ ಕೆಟ್ಟ ನಿರ್ಧಾರ. ಆ ಕಾರ್ಯಕ್ರಮ ಮಾಡಲು ನಾನು ಎಂದಿಗೂ ಬಯಸಲಿಲ್ಲ ಆದರೆ ನಾನು ಇತರರ ಮಾತನ್ನು ಕೇಳಿ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರೊಡಕ್ಷನ್ ಹೌಸ್ ಮತ್ತು ನಿರ್ಮಾಪಕ ನನಗೆ ಹಲವು ಬಾರಿ ಕಿರುಕುಳ ನೀಡಿದ್ದಾರೆ”ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಕೃಷ್ಣ ಒಂದು ವರ್ಷ ಕಠಿಣ ಸಮಯವನ್ನು ಎದುರಿಸಿದ್ದಾರೆ ಅದನ್ನು ಬರೆಯಲು ಕೈ ನಡುಗುತ್ತಿದೆ ಎಂದು ಅವರು ಅನುಭವಿಸಿದ ಕಿರುಕುಳ ಹಾಗೂ ಕಹಿ ಘಟನೆಯನ್ನು ತಮ್ಮ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ತಾನು ಕಿರುಕುಳದಿಂದ ಬೇಸತ್ತು ಖಿನ್ನತೆಯನ್ನು ಕೂಡ ಅನುಭವಿಸಿರುವುದಾಗಿ ಶಗುನ್ ನಿರ್ಮಾಪಕರ ವಿರುದ್ದ ಆರೋಪಿಸಿದರು. ಇವರಿಗೆ ಐದು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bu0PpuFHlmt705QwiTL3vv
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA