ಬೆಂಗಳೂರು: ನಾನು ವಯಸ್ಸಿನಲ್ಲಿ ಕಿರಿಯನಾದರೂ, ನನ್ನನ್ನು ಸ್ವಾಗತಿಸಲು ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಎದ್ದು ನಿಂತರು. ಅವರ ಸರಳ ನಡೆಯಿಂದ ನಾನು ಆಶ್ಚರ್ಯ ಚಕಿತನಾಗಿದ್ದೆ ಎಂದು 1991 ರ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ಕೇಡರ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್)ಯಾಗಿರುವ ಎಲ್‌ಕೆ ಅತೀಕ್ ಹೇಳಿದ್ದಾರೆ.
ಮಾಜಿ ಪಿಎಂ ಮನಮೋಹನ್ ಸಿಂಗ್ ಅವರು ನಿಧನರಾದ ಹಿನ್ನೆಲೆ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡ ಎಲ್.ಕೆ.ಅತೀಕ್, ಪ್ರೋಟೋಕಾಲ್ ನ ಭಾಗವಾಗಿ, ಡಾ.ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ನನ್ನನ್ನು ಅಂದಿನ ಪ್ರಧಾನಿಯವರ ಅಧಿಕೃತ ನಿವಾಸ 7, ರೇಸ್ ಕೋರ್ಸ್ ರಸ್ತೆಗೆ ಕರೆದೊಯ್ಯಲಾಯಿತು. ಅವರು ತಮ್ಮ ಬರವಣಿಗೆಯ ಮೇಜಿನ ಬಳಿ ಕುಳಿತಿದ್ದರು, ನಾನು ಹೋದ ಕೂಡಲೇ ಅವರು ಎದ್ದು ನನ್ನನ್ನು ಸ್ವಾಗತಿಸಿದರು ಮತ್ತು ನನ್ನ ಹಿನ್ನೆಲೆಯ ಬಗ್ಗೆ ಕೇಳಿದರು ಹಾಗೂ ನನ್ನ ಕುಟುಂಬದ ಬಗ್ಗೆ ವಿಚಾರಿಸಿದರು. ಅವರ ಅಸಾಧಾರಣ ಸರಳ ನಡವಳಿಕೆಯ ಸಂಸ್ಕೃತಿಯಿಂದ ನಾನು ಅಶ್ಚರ್ಯಚಕಿತನಾದೆ ಎಂದು ಅವರು ಹೇಳಿದ್ದಾರೆ.
ಅಧಿಕಾರಶಾಹಿಗಳಾದ ನಾವು ನಮ್ಮ ಕಿರಿಯರನ್ನು ಸ್ವಾಗತಿಸಲು ಎದ್ದೇಳುವುದಿಲ್ಲ, ಆದರೆ ನಾನು ದೇಶದ ಪ್ರಧಾನಿಯ ಮುಂದೆ ಇದ್ದೆ ಹಾಗೂ ಅವರು ನನ್ನನ್ನು ಸ್ವಾಗತಿಸಲು ಎದ್ದು ನಿಂತಿದ್ದರು ಎಂದು ಅವರು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx