ಹುಬ್ಬಳ್ಳಿ: ನಾನು ಕಾಂಗ್ರೆಸ್ ಪಾರ್ಟಿ ಸೇರಿದ್ದು ಒಳ್ಳೆಯ ನಿರ್ಧಾರ ಅಂತ ಜನ ಹೇಳುತ್ತಿದ್ದಾರೆ. ಯಾವುದೇ ಪಕ್ಷಕ್ಕೆ ಪಕ್ಷ ಮತ್ತು ವ್ಯಕ್ತಿ ಬೇಕು. ನಾನು ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಜನರಿಗೆ ಮನವೊಲಿಸಲು ಮುಂದಾಗಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ನಾನು 70 ವರ್ಷದ ಮೇಲೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಆದರೆ ಸಕ್ರಿಯ ರಾಜಕೀಯದಲ್ಲಿರುತ್ತೇನೆ. ಆದರೆ ಯಾವುದೇ ಮಾದರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆಯಾದ ಮೇಲೆ ಸ್ಥಳೀಯ ನಾಯಕರು ನನಗೆ ಶಕ್ತಿ ತುಂಬವ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಸಹ ನನಗೆ ಬೆಂಬಲ ನೀಡಿದ್ದಾರೆ. ಕೊಪ್ಪಳ, ವಿಜಯಪುರ, ಸಿಂದಗಿ, ಹಾವೇರಿ, ಹಾನಗಲ್ಲನಲ್ಲಿ ನಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಾನೆ. ಎಲ್ಲಾ ಕಡೆ ಕಾಂಗ್ರೆಸ್ ಗೆ ದೊಡ್ಡ ಬೆಂಬಲ ಸಿಗುತ್ತಿದೆ. ನಾನು ಕಳೆದ ಬಾರಿ ಮಾಡಿದ ಚುನಾವಣೆಗಿಂತ ಈ ಬಾರಿ ಜಾಸ್ತಿಯಾಗುತ್ತಿದೆ ಎಂದರು.
ದಿನದಿಂದ ದಿನಕ್ಕೆ ಜನರು ಮೇಲೆ ಒಲವು ತೋರಿಸುತ್ತಿದ್ದಾರೆ. ಎಲ್ಲಾ ಕಡೆ ಜನಸ್ಪಂದನ ಸಿಗುತ್ತಿದೆ. ಬಿಜೆಪಿಯಲ್ಲಿ ಇದ್ದ ಗೌರವ, ಬೆಂಬಲ, ಪ್ರೀತಿ ಈಗ ಕಾಂಗ್ರೆಸ್ ಬಂದ ಮೇಲೂ ಸಿಗುತ್ತಿದೆ. ಆರು ಚುನಾವಣೆಗಿಂತ ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಆರಿಸಿ ಬರುತ್ತೇನೆ. ನಾನು ಕಾಂಗ್ರೆಸ್ ಸೇರಿದ ಮೇಲೆ ಬಿಜೆಪಿ ಚಿಂತೆಗೀಡಾಗಿದೆ. ಷಡ್ಯಂತ್ರ, ಕುತಂತ್ರದಿಂದ ಜಗದೀಶ್ ಶೆಟ್ಟರ್ ಸೋಲಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಜನಪರವಾಗಿಲ್ಲ, ಜನರ ಸುಖ ದುಃಖದಲ್ಲಿ ಭಾಗಿಲ್ಲ. ಕೆಲವೊಬ್ಬರು ಜಗದೀಶ್ ಶೆಟ್ಟರ್ ಸೋಲಿಸಿ ಖುಷಿಪಡಬೇಕು ಎಂದುಕೊಂಡಿದ್ದಾರೆ. ಆದರೆ ಅವರ ಕನಸು ನನಸಾಗಲ್ಲ ಎಂದ ಅವರು ಇದೇ ವೇಳೆ ಬಿಎಲ್ ಸಂತೋಷ್ ಹರಿಹಾಯ್ದು, ಲಿಂಗಾಯತ ನಾಯಕರನ್ನು ಮುಗಿಸುವ ತಂತ್ರ ಮತ್ತೆ ಮುಂದುವರಿಯುತ್ತಿದೆ. ಯಡಿಯೂರಪ್ಪ ರನ್ನು ಯಾರ ಕಾರಣಕ್ಕೆ ಅಧಿಕಾರದಿಂದ ಕೆಳಗಿಳಿಸಿದ್ರಿ. ವಯಸ್ಸಾದ್ರೂ ಅವರಿಂದ ಈ ಚುನಾವಣೆಯಲ್ಲಿ ಉಪಯೋಗ ತೆಗೆದುಕೊಳ್ಳುತ್ತಿದ್ದೀರಿ. ಬಿಎಲ್ ಸಂತೋಷ್ ರಿಂದ ಬಲಾಢ್ಯ ಮತ್ತು ಹಿರಿಯ ನಾಯಕರನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


