ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಬೋರ್ ವೆಲ್ ಕೊರೆಯೋರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಜಲಮಂಡಳಿ ಮಹತ್ವದ ಕ್ರಮ ಕೈಗೊಂಡಿದೆ. ಅನುಮತಿ ಪಡೆಯದೇ ಬೋರ್ ವೆಲ್ ಕೊರೆದರೆ ಅಂತವರ ವಿರುದ್ಧ ಪೊಲೀಸರಿಗೆ ದೂರು ನೀಡಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರೋ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಜೊತೆಗೆ ಕಾವೇರಿ ನೀರಿನ ಸಂಕಷ್ಟ ಎದುರಾದ ಬೆನ್ನಲ್ಲೇ ಬೋರ್ ವೆಲ್ ಕೊರೆಯುತ್ತಿರೋರ ಸಂಖ್ಯೆ ಹೆಚ್ಚಾಗಿದೆ.
ಮೇಡಹಳ್ಳಿಯ ಸಾಯಿ ಬಡಾವಣೆಯಲ್ಲಿ ಅನುಮತಿ ಇಲ್ಲದೆ ಬೋರ್ ವೆಲ್ ಕೊರೆಯುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿ ಠಾಣೆಗೆ ದೂರು ನೀಡಿದೆ. ದೂರು ಕೊಟ್ಟು ಬೋರ್‌ವೆಲ್ ಕೊರೆಯೋದನ್ನು ನಿಲ್ಲಸಿ ಅನಧಿಕೃತವಾಗಿ ಕೊರೆಯುವವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಆಗ್ರಹಿಸಿದೆ. ನೀರಿಗೆ ಸಂಕಷ್ಟ ಎದುರಾದ ಬೆನ್ನಲ್ಲೇ ಬೋರ್‌ವೆಲ್ ಕೊರೆಯುವ ಹಾವಳಿ ಜಲಮಂಡಳಿ ನಿದ್ದೆಗೆಡಿಸಿದೆ.
ಅಂತರ್ಜಲದ ಸಮಸ್ಯೆಯಿಂದಾಗಿ ಬೋರ್‌ವೆಲ್ ಕೊರೆಯುವವರ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಜಲಮಂಡಳಿ ಕ್ರಮ ಕೈಗೊಳ್ಳುತ್ತಿದೆ.
ವರದಿ: ಆಂಟೋನಿ ಬೇಗೂರು


