ನರೇಂದ್ರ ಮೋದಿ ನಮ್ಮ ಪಕ್ಷವನ್ನ ಮುಗಿಸಲು ನಿಂತಿದ್ದಾರೆ. ಈ ಚುನಾವಣೆಯಲ್ಲಿ ಮೋದಿ ಗೆದ್ದರೇ ಎಲ್ಲಾ ವಿಪಕ್ಷಗಳ ನಾಯಕರನ್ನ ಜೈಲಿಗೆ ಕಳುಹಿಸ್ತಾರೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆರೋಪಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಅಮ್ ಆದ್ಮಿ ಪಕ್ಷವನ್ನ ನಿರ್ನಾಮ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಮೋದಿ ಅವರ ಉದ್ದೇಶ ಒನ್ ನೇಷನ್ ಒನ್ ಲೀಡರ್. ಅವರೊಬ್ಬರೇ ಲೀಡರ್ ಆಗಿ ಇರಬೇಕೆಂಬುದು ಅವರ ಉದ್ದೇಶ. ವಿಪಕ್ಷ ನಾಯಕರನ್ನ ಜೈಲಿಗೆ ಕಳುಹಿಸುವುದು ಮೋದಿ ಉದ್ದೇಶ.
ನಮ್ಮ ಪಕ್ಷವನ್ನ ಮುಗಿಸಲು ಬಿಜೆಪಿಗರು ನಿಂತಿದ್ದಾರೆ. ಈ ಚುನಾವಣೆಯಲ್ಲಿ ಮೋದಿ ಗೆದ್ದರೇ ಎಲ್ಲಾ ವಿಪಕ್ಷನಾಯಕರನ್ನೂ ಜೈಲಿಗೆ ಕಳಿಸುತ್ತಾರೆ. ಈಗಾಗಲೇ ನಮ್ಮ ಪಕ್ಷದ ನಾಲ್ವರನ್ನ ಜೈಲಿಗೆ ಕಳುಹಿಸಿದ್ದಾರೆ ಮೋದಿಗೆ ನಮ್ಮ ಪಕ್ಷ ಎಂದ್ರೆ ಕ್ರಶ್. ನಾನು ಹೊರಬರುತ್ತೇನೆ ಎಂದು ಊಹಿಸಿರಲಿಲ್ಲ. ನನಗೆ ಜಾಮೀನು ಸಿಗುವ ನಿರೀಕ್ಷೆ ಇರಲಿಲ್ಲ ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296