ಭೋಪಾಲ್: ‘ ಮನೆಯ ಟಿವಿಯಲ್ಲಿ ಮೋದಿ ಫೋಟೊ ಬಂದರೆ ಆ ಮನೆಗೆ ದಾರಿದ್ರ್ಯ ಸುತ್ತಿಕೊಳ್ಳುತ್ತದೆ’ ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ.
ಮಧ್ಯಪ್ರದೇಶದ ಧಾರ್ ನಲ್ಲಿ ನಡೆಯುತ್ತಿರುವ ‘ಭಾರತ ಜೋಡೊ ಯಾತ್ರೆ’ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ. ‘ ಬೆಳಿಗ್ಗೆ ಟಿವಿ ಆನ್ ಮಾಡಿದರೆ ಮೊದಲು ಮೋದಿ ಅವರ ಫೋಟೊ ಕಾಣುತ್ತದೆ. ಯಾರ ಮನೆಯಲ್ಲಿ ಮೋದಿ ಫೋಟೊ ಕಾಣುವುದೋ ಆ ಮನೆಗೆ ದರಿದ್ರ ಅಂಟಿಕೊಳ್ಳುತ್ತದೆ’ ಎಂದು ಹೇಳಿದ್ದಾರೆ. ಖರ್ಗೆ ಈ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿಗೆ ಅಭಿವೃದ್ಧಿ ಬೇಡ, ಅವರಿಗೆ ಬಡವರನ್ನು ಕಂಡರೆ ಆಗುವುದಿಲ್ಲ. ಬಡವರ ಮಕ್ಕಳು ಓದಿ ಮುಂದೆ ಬಂದರೆ ಬಿಜೆಪಿಗೆ ಸಮಸ್ಯೆ ಹೀಗಾಗಿ ಬಡವರ ವಿರುದ್ಧವೇ ಯೋಜನೆ ರೂಪಿಸುತ್ತಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


