ನನ್ನ ಸಿನಿಮಾಗಳಿಗೆ ಪ್ರಶಸ್ತಿ ಬಂದರೆ ಅದನ್ನು ಕಸದ ಬುಟ್ಟಿಗೆ ಹಾಕುತ್ತೇನೆ ಎಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ ಕುರಿತು ತಮಿಳಿನ ಖ್ಯಾತ ನಟ ವಿಶಾಲ್ ನೀಡಿರುವ ಹೇಳಿಕೆ ಇದೀಗ ಚರ್ಚೆಯ ವಿಷಯವಾಗಿದೆ.
ಮಾರ್ಕ್ ಆಂಟನಿ ಸಿನಿಮಾದ ಪ್ರಚಾರದಲ್ಲಿ ಮಾತನಾಡಿರುವ ಅವರು ನನಗೆ ಪ್ರಶಸ್ತಿಗಳಲ್ಲಿ ನಂಬಿಕೆಯೇ ಇಲ್ಲ, ನಿಜವಾದ ಪ್ರಶಸ್ತಿಗಳನ್ನು ಅಭಿಮಾನಿಗಳು ನೀಡುತ್ತಾರೆ.
ನಾನು ಇಂಡಸ್ಟ್ರಿಯಲ್ಲಿರುವುದು ಪ್ರೇಕ್ಷಕರ ಪ್ರೀತಿ ಹಾಗೂ ಆಶಿರ್ವಾದದಿಂದ ಮಾತ್ರ. ಹೀಗಿರುವಾಗ ನನ್ನ ಸಿನಿಮಾಗಳಿಗೆ ಪ್ರಶಸ್ತಿಗಳು ಬಂದರೂ ಕಸದ ಬುಟ್ಟಿಗೆ ಹಾಕುತ್ತೇನೆ ಎಂದಿರುವುದು ವಿವಾದಕ್ಕೆ ಕಾರಣವಾಗಿದೆ.


