ಭೋಪಾಲ್: ಪತಿಯೇ ಪತ್ನಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪತ್ನಿ ನಿಶಾ ನಾಪಿತ್ ಮೃತ ದರ್ದೈವಿಯಾಗಿದ್ದರೆ, ಪತಿ ಮನೀಶ್ ಶರ್ಮಾ ಕೊಲೆ ಆರೋಪಿಯಾಗಿದ್ದಾರೆ.
ಸರ್ವೀಸ್ಬುಕ್, ಬ್ಯಾಂಕ್ ಖಾತೆ ಎಲ್ಲೂ ನಾಮಿನಿಯಲ್ಲಿ ತನ್ನ ಹೆಸರಿಲ್ಲ ಎಂದು ಅವರ ಪತಿ ಮನೀಶ್ ಶರ್ಮಾ ಅಸಮಾಧಾನಗೊಂಡಿದ್ದ. ದಿಂಬಿನಿಂದ ಪತ್ನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದ, ಮೂಗಿನಿಂದ ವಿಪರೀತ ರಕ್ತಸ್ರಾವ ಆಗಿತ್ತು, ಅದನ್ನು ಒರೆಸಿದ್ದ, ಬಳಿಕ ಸಾಕ್ಷ್ಯಗಳನ್ನು ನಾಶ ಮಾಡಲು ದಿಂಬಿನ ಕವರ್ ಹಾಗೂ ಹಾಸಿಗೆ ವಸ್ತ್ರಗಳನ್ನು ವಾಶಿಂಗ್ ಮೆಷಿನ್ ಗೆ ಹಾಕಿದ್ದ. ಬಳಿಕ ಪತಿ ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆದು ಸಹಜ ಸಾವು ಎಂದು ನಿರೂಪಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಈ ವಾಷಿಂಗ್ ಮೆಷಿನ್ ಇಂದಲೇ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿಂಬಿನ ಕವರ್ ಹಾಗೂ ಬೆಡ್ಶೀಟ್ ಇದೀಗ ಪೊಲೀಸರ ಕೈಗೆ ಸಿಕ್ಕಿದೆ. ನಾಪಿತ್ ಸಹೋದರಿ ನೀಲಿಮಾ ಅವರು ಶರ್ಮಾ ಅವರೇ ತನ್ನ ಸಹೋದರಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆತ ನಿತ್ಯ ಆಕೆಗೆ ಹಣಕ್ಕಾಗಿ ಪೀಡಿಸುತ್ತಿದ್ದ, ಕಿರುಕುಳ ನೀಡುತ್ತಿದ್ದ, ನನ್ನ ತಂಗಿಗೆ ಯಾವುದೇ ಕಾಯಿಲೆಗಳಿರಲಿಲ್ಲ, ಮನೀಶ್ ಏನೋ ತಪ್ಪು ಮಾಡಿದ್ದಾನೆ ಎಂದು ಹೇಳಿದ್ದಾರೆ. 45 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 302,304 ಬಿ ಮತ್ತು 201 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


